ಸಿದ್ದಾಪುರ : ಕಳೆದ ನಾಲ್ಕೈದು ತಿಂಗಳಿನಿಂದ ವಾಹನದ ದುರಸ್ಥಿ ಹಾಗೂ ದಾಖಲೆ ಸರಿ ಇಲ್ಲದ ಕಾರಣ ತಾಲೂಕಿನಲ್ಲಿ ಅಗ್ನಿಶಾಮಕ ದಳದ ಸೇವೆ ಸ್ಥಗಿತಗೊಂಡಿತ್ತು ಬುಧವಾರ ಸಿದ್ದಾಪುರ ಘಟಕಕ್ಕೆ ವ್ಯವಸ್ಥಿತ ವಾಹನ ಬಂದಿದ್ದು ಸಾರ್ವಜನಿಕರಿಗೆ ಸೇವೆ ಆರಂಭಗೊಂಡಿದೆ.
ಯಾವುದೇ ತುರ್ತು ಪರಿಸ್ಥಿತಿ ಸಂದರ್ಭ ಎದುರಾದಾಗ ಕರೆ ಮಾಡಿ ಸೇವೆ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಿದ್ದಾಪುರ ಅಗ್ನಿಶಾಮಕ ದಳ ಘಟಕದಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಈ ಹಿಂದೆ ಸೇವೆ ಆರಂಭಗೊಂಡು ಮದ್ಯದಲ್ಲಿ ಸೇವೆ ಸ್ಥಗಿತಗೊಂಡಿತ್ತು, ಇದರಿಂದ ಘಟಕ ಅಧಿಕಾರಿಗಳು ಸಿಬ್ಬಂದಿಗಳು ಇದ್ದು ಸಾರ್ವಜನಿಕರಿಗೆ ಸೇವೆ ಇಲ್ಲದಂತೆ ಆಗಿತ್ತು, ತುರ್ತು ಪರಿಸ್ಥಿತಿ ವೇಳೆಯಲ್ಲಿ ಗಡಿ ಭಾಗದ ಅಂದರೆ ಸಾಗರ ಶಿರಸಿ ಕಡೆಗಳಿಂದ ವಾಹನ ಬರಬೇಕಿತ್ತು, ಎಷ್ಟೋ ಘಟನೆಗಳಲ್ಲಿ ಅಲ್ಲಿಂದ ವಾಹನ ಬರುವ ಮೊದಲೇ ಹುಲ್ಲಿನ ಬಣವೆ, ಕರಡದ ಬೇಣ, ವಸ್ತುಗಳು ಸಂಪೂರ್ಣ ಸುಟ್ಟು ಜನತೆಗೆ ನಷ್ಟದ ಜೊತೆಗೆ ಸಂಕಷ್ಟ ಪಡೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೆ ಸೇವೆ ಆರಂಭವಾಗಿರುವುದು ಅನುಕೂಲವಾಗಲಿದೆ.–
ಪ್ರಶಾಂತ ಮಾಸ್ತಿಹಕ್ಲು ಸ್ಥಳೀಯ ಸಾರ್ವಜನಿಕರು