• Slide
  Slide
  Slide
  previous arrow
  next arrow
 • ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ: ದೋವಲ್‌ ಜೊತೆ ಅಮಿತ್‌ ಶಾ ಮಹತ್ವದ ಸಭೆ

  300x250 AD

  ನವದೆಹಲಿ: ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರದ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

  ದೋವಲ್ ಅವರು ಶಾ ಅವರನ್ನು ಭೇಟಿ ಮಾಡಲು ನಾರ್ತ್ ಬ್ಲಾಕ್‌ಗೆ ಆಗಮಿಸಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ.

  ಮೂರು ದಿನಗಳಲ್ಲಿ ಕಣಿವೆಯಲ್ಲಿ ಹಿಂದೂಗಳ ಮೇಲಿನ ಎರಡನೇ ಉದ್ದೇಶಿತ ದಾಳಿ ನಿನ್ನೆ ನಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್‌ನ್ನು ಗುಂಡು ಹಾರಿಸಿ ಕೊಂದಿದ್ದಾರೆ.

  ಇಲಾಖಾಹಿ ದೇಹತಿ ಬ್ಯಾಂಕ್‌ನ ಅರೆಹ್ ಶಾಖೆಗೆ ಭಯೋತ್ಪಾದಕ ನುಗ್ಗಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಹಂತಕನು ಶಾಖೆಯೊಳಗೆ ಪ್ರವೇಶಿಸಿ ಗುಂಡು ಹಾರಿಸಿ ಪರಾರಿಯಾಗುವುದನ್ನು ಸೆರೆಯಾಗಿದೆ. ವಿಜಯ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು.

  300x250 AD

  ಜಮ್ಮುವಿನ ಹಿಂದೂ ಶಿಕ್ಷಕಿ ರಜನಿ ಬಾಲಾ ಅವರನ್ನು ಕುಲ್ಗಾಮ್‌ನಲ್ಲಿ ಶಾಲೆಯ ಹೊರಗೆ ಭಯೋತ್ಪಾದಕರು ಕೊಂದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ.

  ಕೃಪೆ- news13.in

  Share This
  300x250 AD
  300x250 AD
  300x250 AD
  Leaderboard Ad
  Back to top