• Slide
    Slide
    Slide
    previous arrow
    next arrow
  • ಫಿಟ್ ಇಂಡಿಯಾ ಫ್ರೀಡಂ ರೈಡರ್ ಸೈಕಲ್ ರ‍್ಯಾಲಿಗೆ ಚಾಲನೆ

    300x250 AD

    ನವದೆಹಲಿ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಬೆಳಿಗ್ಗೆ ವಿಶ್ವ ಬೈಸಿಕಲ್ ದಿನದ ಹಿನ್ನೆಲೆಯಲ್ಲಿ ನವದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಫ್ರೀಡಂ ರೈಡರ್ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ, ಠಾಕೂರ್ ಅವರು ಸೇರಿದಂತೆ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಕಿರಣ್ ರಿಜ್ಜು ಜೊತೆಗೆ 750 ಯುವ ಸೈಕ್ಲಿಸ್ಟ್‌ಗಳು ಏಳೂವರೆ ಕಿಲೋಮೀಟರ್ ದೂರ ಪೆಡಲ್ ಮಾಡಿದರು.

    ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈ ಬೈಸಿಕಲ್ ರ‍್ಯಾಲಿಯನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, ಫಿಟ್ ಇಂಡಿಯಾ ಅಭಿಯಾನವನ್ನು ಉತ್ತೇಜಿಸಲು ಜನರು ಸೈಕಲ್‌ಗಳನ್ನು ಬಳಸಬೇಕೆಂದು ಒತ್ತಾಯಿಸಿದರು.

    ನೆಹರು ಯುವ ಕೇಂದ್ರ ಸಂಘಟನೆಯು ದೇಶದಾದ್ಯಂತ 75 ಪ್ರಮುಖ ಸ್ಥಳಗಳಲ್ಲಿ ಸೈಕಲ್ ರ‍್ಯಾಲಿ ನಡೆಸುತ್ತಿದ್ದು, ಇದರಲ್ಲಿ 75 ಭಾಗವಹಿಸುವವರು ಏಳೂವರೆ ಕಿಲೋಮೀಟರ್ ದೂರ ಕ್ರಮಿಸಲಿದ್ದಾರೆ.

    300x250 AD

    ಇಂದು ಒಂದೇ ದಿನದಲ್ಲಿ ಒಂಬತ್ತು ಲಕ್ಷ ಅರವತ್ತೆಂಟು ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಒಂದು ಲಕ್ಷದ ಇಪ್ಪತ್ತೊಂಬತ್ತು ಸಾವಿರ ಯುವ ಸೈಕ್ಲಿಸ್ಟ್‌ಗಳು ಬೈಸಿಕಲ್ ರ‍್ಯಾಲಿಗಳ ಮೂಲಕ ಕ್ರಮಿಸಲಿದ್ದಾರೆ.

    ದೈಹಿಕ ಸಾಮರ್ಥ್ಯದ ಚಟುವಟಿಕೆಗಳಿಗಾಗಿ ಜನರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

    ಕೃಪೆ; news13.in

    Share This
    300x250 AD
    300x250 AD
    300x250 AD
    Leaderboard Ad
    Back to top