Slide
Slide
Slide
previous arrow
next arrow

ಅಹಮದಾಬಾದಿನಲ್ಲಿ ಒಲಿಂಪಿಕ್ ಮಟ್ಟದ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ

300x250 AD

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ 632 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಒಲಿಂಪಿಕ್ ಮಟ್ಟದ ಕ್ರೀಡಾ ಸಂಕೀರ್ಣಕ್ಕೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಒಲಿಂಪಿಕ್‌ ಕ್ರೀಡಾಕೂಟಗಳನ್ನು ಗುರಿಯಾಗಿಟ್ಟುಕೊಂಡು ಈ ಕ್ರೀಡಾ ಸಂಕೀರ್ಣ ನಿರ್ಮಾಣವಾಗುತ್ತಿದೆ.

ಅಹಮದಾಬಾದ್‌ನ ನಾರನ್‌ಪುರ ಪ್ರದೇಶದಲ್ಲಿ ನಿರ್ಮಾಣವಾಗುವ ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣವು 18 ಎಕರೆ ಪ್ರದೇಶದಲ್ಲಿ ಈಜು ಸೇರಿದಂತೆ ಹಲವಾರು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಡಲು ಮತ್ತು ತರಬೇತಿ ನೀಡಲು ಸೌಲಭ್ಯಗಳನ್ನು ಹೊಂದಿರಲಿದೆ. ಅಲ್ಲದೆ, ಇದು ಏಕಕಾಲದಲ್ಲಿ ಸುಮಾರು 7,000 ಪ್ರೇಕ್ಷಕರಿಗೆ ಕುಳಿತುಕೊಳ್ಳುವ ಸೌಲಭ್ಯ ಇರಲಿದೆ.

1.15 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಹೊಂದಿರುವ ಈ ವಿಶಾಲವಾದ ಕ್ರೀಡಾ ಸೌಲಭ್ಯ ಒಂದು ಒಳಾಂಗಣ ಕ್ರೀಡಾ ಅಖಾಡ, ಸಮುದಾಯ ಕ್ರೀಡಾ ಮೈದಾನ ಮತ್ತು ಅಕ್ವಾಟಿಕ್ ಸ್ಟೇಡಿಯಂ ಹೊಂದಿರಲಿದೆ.

300x250 AD

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ, ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ನಾರಣಪುರ ಕ್ರೀಡಾ ಸಂಕೀರ್ಣಗಳನ್ನು ಹೊಂದಿರವ ಅಹಮದಾಬಾದ್ ನಗರವನ್ನು ಒಲಿಂಪಿಕ್ಸ್‌ಗೆ ಸಿದ್ಧತೆಗಳನ್ನು ಮಾಡಲು ಪ್ರಶಸ್ತವಾದ ನಗರವನ್ನಾಗಿ ಮಾಡುತ್ತದೆ ಎಂದು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ನಿರೀಕ್ಷಿಸುತ್ತಿವೆ.

ಕೃಪೆ- news13.in

Share This
300x250 AD
300x250 AD
300x250 AD
Back to top