• Slide
    Slide
    Slide
    previous arrow
    next arrow
  • ಗ್ಯಾನವಾಪಿ ಮಸೀದಿ ಕೊಳದಲ್ಲಿ ಶಿವಲಿಂಗ ಪತ್ತೆ

    300x250 AD

    ನವದೆಹಲಿ: ವಿಡಿಯೋ ಸಮೀಕ್ಷೆಗೆ ಒಳಪಟ್ಟಿರುವ ಗ್ಯಾನವಾಪಿ ಮಸೀದಿಯಲ್ಲಿ ಮಹತ್ವದ ಸುಳಿವುಗಳು ಸಿಗುತ್ತಿವೆ. ಮಸೀದಿ ಆವರಣದಲ್ಲಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ.

    ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಗ್ಯಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ವೀಡಿಯೋಗ್ರಾಫಿ ಸಮೀಕ್ಷೆಯು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಇಂದು ಕೊನೆಗೊಂಡಿದೆ.

    ಮಸೀದಿ ಸಂಕೀರ್ಣದ ಒಳಗಿರುವ ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ವಕೀಲರೊಬ್ಬರು ಹೇಳಿದ್ದಾರೆ. “ಕೊಳವನ್ನು ಶುದ್ದೀಕರಣ ಆಚರಣೆಗಳಿಗೆ ಬಳಸಲಾಗುತ್ತಿತ್ತು. ಕೊಳದಿಂದ ನೀರನ್ನು ಬತ್ತಿಸಿದಾಗ ಶಿವಲಿಂಗವು ಕಂಡುಬಂದಿದೆ” ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.

    300x250 AD

    ಈ ಹಿನ್ನೆಲೆಯಲ್ಲಿ ವಾರಣಾಸಿಯ ನ್ಯಾಯಾಲಯವು ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿನ ಕೊಳವನ್ನು ವಶಪಡಿಸಿಕೊಳ್ಳಲು ಆದೇಶಿಸಿದೆ.
    ಸಂಕೀರ್ಣದ ಬಳಿ ಬಿಗಿ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಇಂದು ಬೆಳಿಗ್ಗೆ ಕೊನೆಯ ದಿನದ ಚಿತ್ರೀಕರಣ ಪ್ರಾರಂಭವಾಯಿತು

    Share This
    300x250 AD
    300x250 AD
    300x250 AD
    Leaderboard Ad
    Back to top