Slide
Slide
Slide
previous arrow
next arrow

ಮಾ.27ರಿಂದ ಅಂತಾರಾಷ್ಟ್ರೀಯ ವಿಮಾನಗಳ ಎಲ್ಲಾ ಸೇವೆಗಳು ಪುನರಾರಂಭ

300x250 AD

ನವದೆಹಲಿ: ಅಂತಾರಾಷ್ಟ್ರೀಯ ವಿಮಾನಗಳ ಎಲ್ಲಾ ಸೇವೆಗಳು ಇನ್ಮುಂದೆ 100 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಮಾ.27 ರೊಳಗೆ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

ಒಂದು ತಿಂಗಳ ವಿರಾಮದ ನಂತರ ಬಜೆಟ್ ಅಧಿವೇಶನದ ಎರಡನೇ ಭಾಗಕ್ಕಾಗಿ ಮೇಲ್ಮನೆ ಸಭೆ ಸೇರಿದಾಗ ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ಈ ಘೋಷಣೆ ಮಾಡಿದರು.

“ಭಾರತದಲ್ಲಿ ಕರೋನವೈರಸ್ ಪರಿಸ್ಥಿತಿ ಈಗ ಸುಧಾರಿಸಿರುವುದರಿಂದ ಮಾರ್ಚ್ 27 ರೊಳಗೆ ಎಲ್ಲಾ ನಿಯಮಿತ ಅಂತರಾಷ್ಟ್ರೀಯ ವಿಮಾನಗಳು 100 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ” ಎಂದು ಸಿಂಧಿಯಾ ಹೇಳಿದರು.

ಮಾರ್ಚ್ 23, 2020 ರಿಂದ  ಎಲ್ಲಾ ಅಂತರರಾಷ್ಟ್ರೀಯ  ವಿಮಾನಗಳನ್ನು ಸರ್ಕಾರ ನಿರ್ಬಂಧಿಸಿದೆ.

300x250 AD

ಆದರೆ ಜುಲೈ 2020 ರಿಂದ ಭಾರತ ಮತ್ತು ಇತರ 35 ದೇಶಗಳ ನಡುವೆ ವಿಶೇಷ ಅಂತರಾಷ್ಟ್ರೀಯ ವಿಮಾನಗಳು ಏರ್‌ ಬಬಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪ್ರಸ್ತುತ ಸರ್ಕಾರದ ನಿರ್ಧಾರ ಅಂತರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ ಮತ್ತು ಕಚ್ಚಾ ತೈಲ ಬೆಲೆಗಳ ಹೆಚ್ಚಳದಿಂದ ಗಗನಕ್ಕೇರುತ್ತಿರುವ ವಿಮಾನ ದರಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುವ ನಿರೀಕ್ಷೆ ಇದೆ.

Share This
300x250 AD
300x250 AD
300x250 AD
Back to top