Slide
Slide
Slide
previous arrow
next arrow

ಭರ್ಜರಿ ಪ್ರದರ್ಶನಗೊಂಡ ‘ದಿ ಕಾಶ್ಮೀರ್‌ ಫೈಲ್ಸ್‌ʼ; 3 ದಿನಗಳಲ್ಲಿ 31.06 ಕೋಟಿ ಗಳಿಕೆ

300x250 AD

ಬೆಂಗಳೂರು:ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರಿ ಫೈಲ್ಸ್’ ಕಾಶ್ಮೀರಿ ಪಂಡಿತರು ತಮ್ಮ ನೆಲದಲ್ಲಿ ಅನುಭವಿಸಿದ ಕಿರುಕುಳ, ಹಿಂಸಾಚಾರದ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಸಂಚಲನವನ್ನೇ ಸೃಷ್ಟಿ ಮಾಡಿದೆ. ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಗಳಿಕೆಯನ್ನು ಕಾಣುತ್ತಿದೆ.

ಈ ಸಿನಿಮಾ ಮಾ.11ರಂದು ದೇಶವ್ಯಾಪಿಯಾಗಿ 630 ಪರದೆಗಳಲ್ಲಿ ಬಿಡುಗಡೆಯನ್ನು ಕಂಡಿತ್ತು. ಆದರೆ ಕೇವಲ ಎರಡು ದಿನಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಪ್ರದರ್ಶನವನ್ನು ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಸಿನಿಮಾ ವೀಕ್ಷಣೆಗಾಗಿ ಥಿಯೇಟರ್‌ಗೆ ಆಗಮಿಸುತ್ತಿದ್ದಾರೆ.

ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿ, ಚಿತ್ರ ಮೂರು ದಿನಗಳಲ್ಲಿ ಒಟ್ಟು 31.06 ಕೋಟಿ ರೂಪಾಯಿ ಗಳಿಕೆಯನ್ನು ಕಂಡಿದೆ ಎಂದು ಹೇಳಿದ್ದಾರೆ.

300x250 AD

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗೆ ಉತ್ತಮ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ಸಿನಿಮಾ ನೋಡಲು ಆಸಕ್ತಿ ವಹಿಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top