• Slide
    Slide
    Slide
    previous arrow
    next arrow
  • ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಸ್ವಸಹಾಯ ಸಂಘ’ದ ಪಾತ್ರ

    300x250 AD

    “ಸ್ವಸಹಾಯ” ಹೆಸರಲ್ಲೆ ಇರುವಂತೆ ಸ್ವ-ಸ್ವಂತಃ ಬೆಳೆದು,ತನ್ನಂತೆ ಇತರರಿಗೂ ಸಹಾಯ ನೀಡುತ್ತ,ಚಾಚುತ್ತ ತಾನೂ ಬೆಳೆಯುವುದು.
    ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಸ್ವಸಹಾಯ ಸಂಘ’ ಬಹುಮುಖ್ಯ ಪಾತ್ರವಹಿಸಿದೆ.ಅದರಲ್ಲೂ ಗ್ರಾಮೀಣ ಮಹಿಳೆಯರ ಜೀವನದ ಭಾಗವೇ ಆಗಿಹೋಗಿದೆ!

    “ಮಹಿಳೆ” ಅಬಲೆಯಿಂದ ಸಬಲೆ ಎಂದೊ ಆಗಿಹೋಗಿದ್ದಾಳೆ ಇನ್ನೇನಿದ್ದರು ಸಬಲತೆಯ ದಾರಿಹೊಕ್ಕದ ಅನೇಕ ಹೆಂಗಳೆಯರಿಗೆ ಮಾರ್ಗದರ್ಶರಾಗಿ ಅವರನ್ನ ಮುಖ್ಯವೇದಿಕೆಗೆ ಬರಮಾಡಬೇಕಾಗಿದೆ.ಏಕೆಂದರೆ,ಮಹಿಳೆ ಇಂದು ಕಾಲಿಡದ ಕ್ಷೇತ್ರವೇ ಇಲ್ಲ ಸಾಗರದಾಳದಿಂದಿಡಿದು ಗಗನದಾಚೆಗೂ ಜಿಗಿದಾಗಿದೆ.ಉದಾ:ಕಾಡೊಳಗಿನ ಪುಟ್ಟ ಹಳ್ಳಿಯೊಂದರಲ್ಲಿ ರೂಪುಗೊಂಡ “”ಶ್ರೀ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘ”ವೊಂದು ದೆಹಲಿಯಂತ ಮಹಾನಗರದೊಳಗೆ ಸಾವಿರಾರು ಅಂತಹುದೇ ಸಂಘಗಗಳ ಜೊತೆ ಪೈಪೋಟಿಗೆ ನಿಂತು ,ಕರ್ನಾಟಕದ ರಾಯಭಾರಿಯಾಗಿ ತಲೆಯೆತ್ತಿ ನಿಂತು,ಕರುನಾಡ ಹಳ್ಳಿಯಲ್ಲಿ ತಯಾರಾದ ಗೃಹ ಉತ್ಪನ್ನಗಳ ಸ್ವಾದವನ್ನ ರಾಷ್ಟ್ರಮಟ್ಟಕ್ಕೆ ಮುಟ್ಟಿಸುತ್ತದೆಂದರೆ ಅದು ಸಾಧನೆಯಲ್ಲದೆ ಮತ್ತೇನು??

    300x250 AD

    ಹೀಗೆ ಇನ್ನೂ ಅನೇಕಾನೇಕ ಉದಾಹರಣೆಗಳೊಂದಿಗೆ ಪ್ರತಿಯೊಬ್ಬ ಮಹಿಳೆಯೂ ಪ್ರೇರೇಪಿತವಾಗಿ ತಮ್ಮ ಮುಂದಿರುವ ಅವಕಾಶಗಳ,ಅನುಕೂಲತೆಗಳ ಸಾಗರದಲ್ಲಿ ಧುಮ್ಮಿಕ್ಕಿ ಇನ್ನೂ ಎತ್ತರೆತ್ತರಕ್ಕೆ ಏರಿ ಸಾಧನೆಯ ಶಿಖರವನ್ನೇರಬೇಕು.ಏಕೆಂದರೆ ಮೊದಲೆಲ್ಲ ಮನೆ-ಮಕ್ಕಳು,ಹೊಲ-ಗದ್ದೆ,ಸಂಸಾರಕ್ಕೆ ಸೀಮಿತವಾಗಿದ್ದ ಹೆಂಗಳೆಯರ ಬದುಕು ಈಗ ಪೂರ್ತಿ ಮಾರ್ಪಾಡಾಗಿದೆ ಎಲ್ಲೆಡೆ ಸಮಾನ ಅವಕಾಶ,ಮಾನ್ಯತೆ,ಪ್ರಾಮುಖ್ಯತೆಗೆ ಸರ್ಕಾರಗಳು ಎಡೆಮಾಡಿಕೊಟ್ಟಿವೆ.ಅವುಗಳ ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ತನ್ನ ಅಸ್ತಿತ್ವದತ್ತ ದಾಪುಗಾಲಾಕಿ ಗುರಿ ಮುಟ್ಟಬೇಕೆನ್ನುತ್ತ ತಮಗೆ ತಿಳಿದಿರುವ ಸಣ್ಣ-ಪುಟ್ಟ ಹವ್ಯಾಸಗಳು ಉದಾ:ಹಪ್ಪಳ,ಉಪ್ಪಿನಕಾಯಿ,ಸಾಂಬಾರ ಪುಡಿಗಳು,ಹಣ್ಣಿನ ಸುಕೇಲಿ,ಜಾಂ,ಹೊಲಿಗೆ,ಕರಕುಶಲ ವಸ್ತುಗಳ ತಯಾರಿಕೆ ಹೀಗೆ ಮುಂತಾದವುಗಳನ್ನ ಪೋಷಿಸಿ ಮನೆಯಲ್ಲಿಯೇ ತಯಾರಿಸಿ ಆರ್ಥಿಕ ಸಧೃಡತೆಯೊಂದಿಗೆ ಯಶಸ್ಸನ್ನಗಳಿಸಿ ತನ್ನ ಮನೆತನ,ಹಳ್ಳಿ,ರಾಜ್ಯ,ದೇಶಕ್ಕೆ ಹೆಮ್ಮೆತರುವಂತಾಗಬೇಕು.

    • ಸುಲೋಚನಾ ಗಣಪತಿ ಭಾಗ್ವತ್
      ಶ್ರೀ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ಅಧ್ಯಕ್ಷೆ, ದೇವರಗದ್ದೆ(ತಾ.ಯಲ್ಲಾಪುರ)
    Share This
    300x250 AD
    300x250 AD
    300x250 AD
    Leaderboard Ad
    Back to top