ತೇಜಸ್ವಿನಿ ಕ್ಷಮೋಪೇತೇ ನಾತಿಕಾರ್ಕಶ್ಯಮಾಚರೇತ್
ಅತಿನಿರ್ಮಂಥನಾದಗ್ನಿಶ್ಚಂದನಾದಪಿ ಜಾಯತೇ ||
ಒಬ್ಬ ತೇಜಸ್ವಿಯಾದ, ಓಜೋವಂತನೂ ಸಮರ್ಥನೂ ಆದ ಹಾಗಿದ್ದೂ ಕ್ಷಮಾಗುಣದಿಂದ ಕೂಡಿದ ವ್ಯಕ್ತಿಯ ಬಳಿಯಲ್ಲಿ ಅತಿಯಾಗಿ ಕಟುತನವನ್ನಾಗಲೀ, ಕರ್ಕಶತೆಯನ್ನಾಗಲೀ ಸಾಧಿಸಬಾರದು. ಅಷ್ಟು ತೇಜಸ್ವೀಯಾದ ಮನುಷ್ಯನೂ ಅತಿಯಾದ ಕಿರಿಕಿರಿಗೆ ಒಳಗಾದಾಗ ತನ್ನ ಸಹನಶೀಲತೆಯನ್ನು ತೊರೆದು ಕ್ರುದ್ಧನಾಗಬಲ್ಲ. ಅತಿಯಾಗಿ ಮಥಿಸಿದರೆ ಚಂದನದಂಥಾ ಚಂದನದಿಂದಲೂ ಬೆಂಕಿಯ ಕಿಡಿಗಳು ಹೊಮ್ಮಲಾರವೇ? ಹಾಗೇ, ಚಂದನದಂತೆ ಶೀತಲಕರವಾದ ವ್ಯಕ್ತಿತ್ವವುಳ್ಳವರೂ ಅತಿಯಾಗಿ ಕಿರಿಕಿರಿಗೊಳಗಾದಾಗ ಸಿಟ್ಟಿಗೆದ್ದಾರು.