Slide
Slide
Slide
previous arrow
next arrow

ಭಾರತೀಯರನ್ನು ಉಕ್ರೇನ್-ರೊಮೇನಿಯಾ ಗಡಿಯ ಮೂಲಕ ಭಾರತಕ್ಕೆ ಕರೆ ತರಲು ಪ್ರಯತ್ನ

300x250 AD

ನವದೆಹಲಿ: ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಭಾರತ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉಕ್ರೇನ್‌ ತನ್ನ ವಾಯು ಮಾರ್ಗಗಳನ್ನು ಮುಚ್ಚಿರುವ ಕಾರಣ ಪಕ್ಕದ ದೇಶದ ಗಡಿಗಳವರೆಗೆ ರಸ್ತೆ ಮಾರ್ಗವಾಗಿ ಬಂದು ಅಲ್ಲಿಂದ ವಾಯ ಮಾರ್ಗವಾಗಿ ತನ್ನವರನ್ನು ಕರೆ ತರಲು ಭಾರತ ಯೋಜಿಸಿದೆ.

ಈಗಾಗಲೇ ಮೊದಲ ಬ್ಯಾಚ್‌ನ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್-ರೊಮೇನಿಯಾ ಗಡಿಗೆ ತೆರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವಾಲಯದ ಕ್ಯಾಂಪ್ ಕಛೇರಿಗಳು ಈಗ ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿ ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಈ ಶಿಬಿರ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.

300x250 AD

ಗಡಿಗೆ ಆಗಮಿಸಿದ ಬಳಿಕ ನಾಗರಿಕರನ್ನು ವಾಯು ಮಾರ್ಗವಾಗಿ ಭಾರತಕ್ಕೆ ಕರೆತರಲಾಗುತ್ತದೆ. ಅದಕ್ಕಾಗಿ ಭಾರತ ಈಗಾಗಲೇ ಹಲವು ದೇಶಗಳೊಂದಿಗೆ ಮಾತುಕತೆ ನಡೆಸಿದೆ.‌

Share This
300x250 AD
300x250 AD
300x250 AD
Back to top