• Slide
    Slide
    Slide
    previous arrow
    next arrow
  • MyGov ನಲ್ಲಿ’ವೀರ್ ಕೊ ನಮನ್’ ಪ್ಯಾನ್ ಇಂಡಿಯಾ ಸೆಲ್ಫಿ ಸ್ಪರ್ಧೆ ಆರಂಭ

    300x250 AD

    ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಾಪನೆಯಾಗಿ ಇಂದಿಗೆ ಮೂರು ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಸೆಲ್ಫಿ ಸ್ಪರ್ಧೆ “ವೀರ್ ಕೊ ನಮನ್” ಆರಂಭಿಸಲಾಗಿದೆ.

    ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಉತ್ತೇಜಿಸಲು ದೇಶಾದ್ಯಂತ ಇರುವ ಯುದ್ಧ ಸ್ಮಾರಕಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳ ಮುಂದೆ  ಸೆಲ್ಫಿ  ಕ್ಲಿಕ್ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸಲು  MyGov ನಲ್ಲಿ ಪ್ಯಾನ್ ಇಂಡಿಯಾ ಸೆಲ್ಫಿ ಸ್ಪರ್ಧೆ “ವೀರ್ ಕೊ ನಮನ್” ಅನ್ನು ಆಯೋಜಿಸಲಾಗಿದೆ.

    ಸ್ಪರ್ಧೆಯು ಭಾರತೀಯ ನಾಗರಿಕರಿಗೆ ಮಾತ್ರ ಮುಕ್ತವಾಗಿದೆ.

    ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ಸಶಸ್ತ್ರ ಪಡೆಗಳ ದೇಶಭಕ್ತಿಯ ಉತ್ಸಾಹ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ  ನಗರ/ರಾಜ್ಯದ ಸಮೀಪವಿರುವ ಯಾವುದೇ ಯುದ್ಧ ಸ್ಮಾರಕ ಅಥವಾ ರಾಷ್ಟ್ರೀಯ ಸ್ಮಾರಕಕ್ಕೆ ಜನರು ಭೇಟಿ ನೀಡಬಹುದು.

    300x250 AD

    ಆಸಕ್ತ ಅಭ್ಯರ್ಥಿಗಳು https://auth.mygov.in/user/login?destination=oauth2/authorize ಮೂಲಕ ನಮೂದುಗಳನ್ನು ಸಲ್ಲಿಸಬಹುದು.

    ರಾಷ್ಟ್ರೀಯ ಯುದ್ಧ ಸ್ಮಾರಕದ ಮೂರನೇ ವಾರ್ಷಿಕೋತ್ಸವದ ನೆನಪಿಗಾಗಿ ಸ್ಪರ್ಧೆಯು 25ನೇ ಫೆಬ್ರವರಿಯಂದು ಪ್ರಾರಂಭವಾಗುತ್ತದೆ ಮತ್ತು 25ನೇ ಮಾರ್ಚ್ 2022 ರಂದು ಕೊನೆಗೊಳ್ಳುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top