Slide
Slide
Slide
previous arrow
next arrow

ಡಾ.ಸಿ.ಫರ್ನಾಂಡೀಸ್ ಕೊ ಆಪರೇಟಿವ್ ಕ್ರೇಡಿಟ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

300x250 AD

ಹೊನ್ನಾವರ:ಒಂದು ಚಿಕ್ಕದಾದ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ದೂರದೃಷ್ಟಿ, ಹಿತದೃಷ್ಟಿ, ಸೇವೆಯೇ ಕಾರಣವಾಗಿದೆ. ಡಾ.ಸಿ. ಫರ್ನಾಂಡೀಸ್ ಕೊ ಆಪರೇಟಿವ್ ಕ್ರೇಡಿಟ್ ಸೊಸೈಟಿಯು ಈ ಮೂರು ಅಂಶಗಳನ್ನು ಅಳವಡಿಸಿಕೊಂಡು ಜನಮನ್ನಣೆಗೆ ಪಾತ್ರವಾಗಿದೆ ಎಂದು ಹಡಿನಬಾಳ ಸಂತ ಫ್ರಾನ್ಸಿಸ್ ಆಸಿಸ್ಸಿ ದೇವಾಲಯದ ಫಾದರ್ ವಿಲ್ಸನ್ ನೊರಾನ್ಹ ಅಭಿಪ್ರಾಯಪಟ್ಟರು.

ತಾಲೂಕಿನ ಕವಲಕ್ಕಿಯ ಮೈತ್ರಿ ಕಾಂಪ್ಲೆಕ್ಸನಲ್ಲಿ ಡಾ. ಸಿ.ಫರ್ನಾಂಡೀಸ್ ಕೊ ಆಪರೇಟಿವ್ ಕ್ರೇಡಿಟ್ ಸೊಸೈಟಿಯ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ನಿಶ್ವಾರ್ಥ ಸೇವೆ ಮಾಡಿದರೆ ಲಾಭ ಕೀರ್ತಿ ಗೌರವ ಹುಡುಕಿಕೊಂಡು ಬರಲಿದೆ ಸಿಬ್ಬಂದಿಗಳು, ಹಾಗೂ ನಿರ್ದೇಶಕರು ಇದನ್ನು ಪಾಲಿಸುವಂತೆ ಸಲಹೆ ನೀಡಿದರು. ಪ್ರಾಮಾಣಿಕತೆ, ದಕ್ಷತೆ,ಸೇವಾಮನೋಭಾವ ಸೊಸೈಟಿಯನ್ನು ಉನ್ನತಮಟ್ಟಕ್ಕೆ ಕರೆದುಕೊಂಡು ಬಂದಿದೆ. ನೂತನ ಶಾಖೆಯ ಸುತ್ತಮುತ್ತಲಿನ ಹಳ್ಳಿಯ ಜನತೆ ಸಂಸ್ಥೆಯೊಂದಿಗೆ ಉತ್ತಮ ವ್ಯವಹರಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು ಕರೆ ನೀಡಿದರು.

ವೈದ್ಯೆ ಹಾಗೂ ಲೇಖಕಿ ಡಾ. ಅನುಪಮ ಎಚ್.ಎಸ್ ಅವರು ಇಂದು ಮತಕ್ಕಾಗಿ ಜನರ ಮದ್ಯೆ ಒಡಕು ಸ್ರಷ್ಠಿಮಾಡುತ್ತಿದ್ದಾರೆ. ಭಾರತ,ಬಹುತ್ವದ ದೇಶ ಇಲ್ಲಿ ಎಲ್ಲಾ ಧರ್ಮದವರು ಸಮಾನ ಹಕ್ಕುಗಳೊಂದಿಗೆಚ,ನೆಮ್ಮದಿಯೊಂದಿಗೆ ಬದುಕಲು ಅವಕಾಶ ಸಿಗಬೇಕು. ವ್ಯಕ್ತಿಯನ್ನು ಅವನ ಧರಿಸು,ಚಿಹ್ನೆಗಳಿಂದ ಗುರುತಿಸಿ ಸಂಭಂದ ಬೆಳೆಸೊದಲ್ಲ. ಅವರೊಳಗಿನ ಚೇತನ ಗುರುತಿಸುವಂತಾಗಬೇಕು ಎಂದರು.

ಮಹಿಳೆಯರು ಪ್ರಾಮಾಣಿಕತೆ ಹಾಗೂ ಸೇವೆ ರೀತಿ ಕರ್ತವ್ಯ ನಿರ್ವಹಿಸುತ್ತಾರೆ. ಸಂಸ್ಥೆಯಲ್ಲಿ ನಿರ್ದೇಶಕ ಹಾಗೂ ಸಿಬ್ಬಂದಿಗಳಿಗೆ 50% ಅವಕಾಶ ನೀಡುವಂತೆ ಸಲಹೆ ನೀಡಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷರಾದ ಪೀಟರ್ ಮೆಂಡಿಸ್ ಮಾತನಾಡಿ 106ವರ್ಷ ಇತಿಹಾಸ ಹೊಂದಿರುವ ನಮ್ಮ ಸೊಸೈಟಿಯು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು 9 ಶಾಖೆಯನ್ನು ತೆರೆದಿದೆ. ಬ್ಯಾಂಕ್ ವ್ಯವಹಾರದ ಮೂಲಕ ಜನಸಾಮನ್ಯರಿಗೆ ಹತ್ತಿರವಾಗಲು ಸಾಲ ಸೌಲಭ್ಯ ಸೇರಿದಂತೆ ಹಲವು ಸೇವೆಯನ್ನು ನೀಡುತ್ತಿದೆ. 12 ವರ್ಷಗಳಿಂದ ಹೆಚ್ಚಿನ ಸೇವೆ ನೀಡಲು ಸಾರ್ವಜನಿಕರ ಸಹಕಾರ ನಿರ್ದೆಶಕರು ಹಾಗೂ ಸಿಬ್ಬಂದಿಗಳ ಸಹಕಾರ ಕಾರಣ ಎಂದರು. ಇದನ್ನು ಕೇವಲ ಸೊಸೈಟಿ ಎಂದು ಪರಿಗಣಿಸಿ ಕರ್ತವ್ಯ ನಿರ್ವಹಿಸುತ್ತಿಲ್ಲ,ಇದು ಒಂದು ದೇವಾಲಯ, ನಮ್ಮದು ಸಮಾಜ ಸೇವೆ ಎನ್ನುವಂತೆ ಎಲ್ಲರು ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಮಾದರಿ ಸೊಸೈಟಿಯಾಗಿ ರೂಪಿಸುತ್ತೇವೆ ಎಂದು ವಿಶ್ವಾಸ ವ್ಯಕಪಡಿಸಿದರು.

ಡಾ. ಅನುಪಮ ಎಚ್.ಎಸ್, ಇಂಟಿರಿಯರ್ ಉಮೇಶ್ ನಾಯ್ಕ ಹಾಗೂ ಸೊಸೈಟಿಯ ಅಧ್ಯಕ್ಷ ಪಿಟರ್ ಮೆಂಡಿಸ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಗ್ವಾ ಗ್ರಾ.ಪಂ. ಅಧ್ಯಕ್ಷೆ ಗೌರಿ ಅಂಬಿಗ, ಫಾದರ್ ಸಿರಿಲ್ ಮಿರಾಂದಾ, ಸೊಸೈಟಿಯ ಉಪಾಧ್ಯಕ್ಷ ಕಾಮಿನ್ ಲೋಪಿಸ್, ಮುಖ್ಯ ಕಾರ್ಯನಿರ್ವಾಹಕ ಕೊಲಿನ್ ಹೊರ್ಟಾ ಉಪಸ್ಥಿತರಿದ್ದರು. ನಿರ್ದೇಶಕರು, ಸಿಬ್ಬಂದಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top