ಶಿರಸಿ: ತಾಲೂಕಿನ ಮೆಣಸಿ ಗ್ರಾಮದ ಹಲಸಿನಕೊಪ್ಪದ ಮಧುರಾ ಮಾಸ್ತ್ಯ ದೇವಾಡಿಗ ಎಂಬುವರ ಮನೆ ಭಾರಿ ಮಳೆಯಿಂದ ಸಂಪೂರ್ಣ ಕುಸಿದು ಹೋಗಿತ್ತು. ಬಿಜಿಪಿ ಮುಖಂಡರೂ ಮತ್ತು ಸಾಮಾಜಿಕ ಹೋರಾಟಗಾರರಾದ ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡರು ಮತ್ತು ಜಡ್ಡಿಗಡ್ಡೆ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಹೆಗಡೆ, ಹಾಗೂ ರಾಘವೇಂದ್ರ ಹೆಗಡೆ ಇವರೆಲ್ಲರೂ ಸ್ಥಳಕ್ಕೆ ಭೇಟಿ ನೀಡಿ ಧನಸಹಾಯ ಮತ್ತು ಕಿರಾಣಿ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿ ಮನೆ ಬಿದ್ದು ಎರಡು ದಿನವಾದರೂ ಸ್ಥಳೀಯ ಶಾಸಕರಾದ ಭೀಮಣ್ಣನವರಾಗಲಿ, ತಹಶೀಲ್ದಾರ್ರಾಗಲಿ, ಎಸಿ, ಡಿಸಿ ಯಾರೊಬ್ಬರೂ ಕೂಡ ಇದುವರೆಗೂ ಭೇಟಿ ನೀಡಿಲ್ಲ. ಈ ರೀತಿ ಜನರನ್ನು ನಿರ್ಲಕ್ಷ್ಯ ಮಾಡುವುದು ತಪ್ಪು, ಕೂಡಲೇ ಶಾಸಕರು ಮತ್ತು ತಹಸೀಲ್ದಾರರು ಆಗಮಿಸಬೇಕು, ಮತ್ತು ಮನೆ ಕಟ್ಟಿಸಿಕೊಡಬೇಕು, ಅಲ್ಲಿಯವರೆಗೂ ತಾತ್ಕಾಲಿಕವಾಗಿ ವಾಸಕ್ಕೆ ಮತ್ತು ಕಿರಾಣಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂಬುದಾಗಿ ಆಗ್ರಹಿಸಿದರು.