Slide
Slide
Slide
previous arrow
next arrow

ಬಾಳಿಗಾ ಮಹಾವಿದ್ಯಾಲಯದಲ್ಲಿ POCSO ACT ಜಾಗೃತಿ ಕಾರ್ಯಕ್ರಮ

300x250 AD

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ Protection of Children from Sexual Offences Act- -2012 ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮುಖ್ಯ ನ್ಯಾಯಾಧೀಶೆ ಶ್ರೀಮತಿ ಭಾರತಿ ಎಸ್. ರಾಯಣ್ಣನವರ ಉದ್ಘಾಟಿಸಿ Pocso- Act – 2012 ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ಮಾಹಿತಿಯನ್ನು ತಿಳಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಕುಮಟಾ ಪಿಎಸ್‌ಐ ರವಿ ರೆಡ್ಡಿ ಕಾಯ್ದೆಯಡಿಯಲ್ಲಿ ಅಪರಾಧಗಳು ಹೇಗೆ ನಡೆಯುತ್ತವೆ ಮತ್ತು ಪರಿಹಾರವನ್ನು ಸೂಚಿಸಿದರು. ಕುಮಟಾ ಸಿಡಿಪಿಒ ಶ್ರೀಮತಿ ಶೀಲಾ ಪಟೇಲ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರವಾರ ಸಿ.ಡಿ.ಪಿ.ಓ ಶ್ರೀಮತಿ ನಂದಿನಿ ಮಕ್ಕಳ ರಕ್ಷಣಾ ಕಾಯ್ದೆಯೊಂದಿಗೆ POCSO ACT 2012 ನಿಂದ ಮಕ್ಕಳ ರಕ್ಷಣೆ ಕುರಿತು ಮಾತನಾಡಿದರು.

300x250 AD

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪ್ರೀತಿ ಪಿ. ಭಂಡಾರಕರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ರೇಖಾ ಸಿ. ಯಲಿಗಾರರವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಿಬ್ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಗೀತಾ ಪೈ ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಅಪರಾಧ ಮುಕ್ತ ಜೀವನ ಕ್ರಮವನ್ನು ತಿಳಿಸಿದರು. ಗಿಬ್ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾದ ಉದಯ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top