Slide
Slide
Slide
previous arrow
next arrow

ಇ-ಖಾತಾ ಪಡೆಯಲು ನಿರಾಸಕ್ತಿ: ಮನೆಮನೆಗೆ ತೆರಳಿ ದಾಖಲೆ ಸಂಗ್ರಹ

300x250 AD

ಸಿದ್ದಾಪುರ: ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಖಾತೆದಾರರು ಇ-ಖಾತಾ ಪಡೆಯಲು ನಿರಾಸಕ್ತಿ ತೋರುತ್ತಿದ್ದು ಇದರಿಂದ ನೀರಿಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗುತ್ತಿಲ್ಲ.ಈಗಾಗಲೇ ಸರ್ಕಾರವು ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ನೀಡಲು ಆದೇಶ ನೀಡಿರುವ ಪ್ರಕಾರ ಪಟ್ಟಣ  ವ್ಯಾಪ್ತಿಯಲ್ಲಿ ವ್ಯಾಪಕವಾದ ಪ್ರಚಾರವನ್ನು ಕೈಗೊಂಡು ಬಿ-ಖಾತಾವನ್ನು ನೀಡಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಖಾತೆದಾರರು ಕೇವಲ ಅರ್ಜಿ ಮಾತ್ರ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಇ-ಖಾತಾವನ್ನು ನೀಡಲು ಸಾಧ್ಯವಾಗುತ್ತಿಲ್ಲ.ದೂರವಾಣಿ ಮೂಲಕ ಸಿಬ್ಬಂದಿಗಳು ಸಂಪರ್ಕಿಸಿದರೂ ಸಹ ಸಾರ್ವಜನಿಕರು ದಾಖಲಾತಿಗಳನ್ನು ಪೂರೈಸದೇ ಇರುವುದರಿಂದ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದ್ದು ಇದಕ್ಕೆ ಸಾರ್ವಜನಿಕರು ಸಹಕರಿಸಲು ಮುಖ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ. 

300x250 AD
Share This
300x250 AD
300x250 AD
300x250 AD
Back to top