Slide
Slide
Slide
previous arrow
next arrow

ಅಂತರಾಷ್ಟ್ರೀಯ ಐಶ್ಡ್ಡೆನ್ ಪ್ರಶಸ್ತಿ – ʻಗ್ರೀನ್ ಆಸ್ಕರ್ ʼ ಸೆಲ್ಕೋ ಮಡಿಲಿಗೆ

300x250 AD

ಶಿರಸಿ: ಸೌರ ಶಕ್ತಿಯ ಬಹು ಬಳಕೆಯ ಸಾಧ್ಯತೆಯನ್ನು ಅನುಷ್ಠಾನಗೊಳಿಸಿ, ಬಡ ಜನರ ಕೌಶಲ್ಯ ಅಭಿವೃದ್ಧಿಗೆ ನೆರವಾದ ಸೆಲ್ಕೋ ಸೋಲಾರ್ ಸಂಸ್ಥೆಗೆ ಅಂತರಾಷ್ಟ್ರೀಯ ಐಶ್ಡ್ಡನ್ – ʻಗ್ರೀನ್ ಆಸ್ಕರ್ ʼ ಲಭಿಸಿದೆ. ಈ ಪ್ರಶಸ್ತಿಯನ್ನು ಸೆಲ್ಕೋ ಸಂಸ್ಥೆಯ ಸಿಇಓ ಮೋಹನ ಭಾಸ್ಕರ ಹೆಗಡೆ ಸ್ವೀಕರಿಸಿದರು.

ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಮೋಹನ ಹೆಗಡೆ, ಬದಲೀ ಇಂಧನ‌ ಬಳಕೆಯ ತತ್ವ ಸಾರಿದ ಸೆಲ್ಕೋ ಸಂಸ್ಥೆ ೧೯೯೫ರಲ್ಲಿ ಮ್ಯಾಗ್ಸತ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಮತ್ತು ನವಿಲೆ ವಿಲಿಯ್ಸಂ ಸ್ಥಾಪಿಸಿದ ಸಂಸ್ಥೆ ಇದಾಗಿದೆ‌. ಬಡತನ‌ ನಿರ್ಮೂಲನೆಗೆ ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದು, ಆಂದ್ರ ಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ.
ಈ ಪ್ರಶಸ್ತಿಯ ಎಲ್ಲಾ ಗೌರವ ಸಂಸ್ಥೆಯ ಎಲ್ಲಾ ಸಹೋದ್ಯೋಗಿಗಳಿಗೆ, ಆಡಳಿತ ಮಂಡಳಿಗೆ ಹಾಗೂ ಸಂಸ್ಥೆಯೊಡನೆ ಸಂಬಂಧ ಹೊಂದಿದ ಎಲ್ಲರ ಪರಿಶ್ರಮಕ್ಕೆ ಸಲ್ಲುತ್ತದೆ ಎಂದರು. ಪ್ರಶಸ್ತಿಯನ್ನು ಲಿಂಕಡಿನ್ ಸಂಸ್ಥೆಯ ಹಣಕಾಸು ನಿರ್ದೇಶಕ ಕ್ರಿಸ್ ಬೇರೆಟ್, ಆಶ್ಡನ್ ಅಧ್ಯಕ್ಷ ಸಹ್ರಾ
ಈ ಪ್ರಶಸ್ತಿ ನೀಡಿದರು. ಜೊತೆಯಲ್ಲಿ ಸೆಲ್ಕೋದ ಸುದೀಪ್ ಘೋಷ್ ಇದ್ದರು.

300x250 AD
Share This
300x250 AD
300x250 AD
300x250 AD
Back to top