
ಶಿರಸಿ: ಇಲ್ಲಿನ ಲಯನ್ಸ್ ಸ್ಕೂಲಿನ ಸಬಾಭವನದಲ್ಲಿ 2025-26 ನೇ ಸಾಲಿನ ಲಯನ್ಸ್ ಕ್ಲಬ್, ಶಿರಸಿ ಲಿಯೋ ಕ್ಲಬ್ ಹಾಗೂ ಶ್ರೀನಿಕೇತನ ಶಾಲೆಯ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಪದಾಧಿಕಾರಿಗಳು ಪದಗ್ರಹಣ ಸಮಾರಂಭವನ್ನು 317ಬಿ ಜಿಲ್ಲಾ ಸಕೆಂಡ್ ವೈಸ್ ಗವರ್ನರ ಎಮ್.ಜೆ.ಎಫ್. ಸುದೇಶ ಬೋರ್ಕರ್ ಗೋವಾ ನೆರವೇರಿಸಿ ಕೊಡಲಿದ್ದಾರೆ. 2025-26 ನೇ ಸಾಲಿಗೆ ಅಧ್ಯಕ್ಷರಾಗಿ ಲಯನ್ ಗುರುರಾಜ ಹೊನ್ನಾವರ, ಕಾರ್ಯದರ್ಶಿ ಲಯನ್ ಮನೋಹರ ಜಿ. ಮಲ್ಮನೆ ಹಾಗೂ ಖಜಾಂಚಿಯಾಗಿ ಲಯನ್ ಪ್ರಕಾಶ ಹೆಗಡೆ ಆಯ್ಕೆ ಆಗಿರುತ್ತಾರೆ.