Slide
Slide
Slide
previous arrow
next arrow

ಕಾರ್ ಕೀ ಕಳ್ಳತನ: ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

300x250 AD

ದಾಂಡೇಲಿ : ನಗರದ ಜೆ.ಎನ್ ರಸ್ತೆಯ ಪುಸ್ತಕ ಮಳಿಗೆಯೊಂದರ ಕೌಂಟರಿನಲ್ಲಿ ಇಟ್ಟಿದ್ದ ಗ್ರಾಹಕರೊಬ್ಬರ ಕಾರಿನ ಕೀಯನ್ನು ಕಳವು ಮಾಡಿದ ಘಟನೆ ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದ್ದು, ಕಾರಿನ ಕೀಯನ್ನು ಕಳವು ಮಾಡುತ್ತಿರುವ ದೃಶ್ಯ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಥಳೀಯ ಗಣೇಶನಗರದ ನಿವಾಸಿ ಮೈಕಲ್ ವ್ಹಾಜ್ ಎಂಬವರು ಜೆ.ಎನ್ ರಸ್ತೆಯಲ್ಲಿರುವ ದಾಮೋದರ ಬುಕ್ ಸ್ಟಾಲಿಗೆ ಪುಸ್ತಕ ಖರೀದಿಗಾಗಿ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕೆಎ 17, ಸಿ 3017 ಸಂಖ್ಯೆಯ ತಮ್ಮ ಕಾರಿನ ಕೀಯನ್ನು ಬುಕ್ ಸ್ಟಾಲಿನ ಕೌಂಟರ್ ನಲ್ಲಿ ಇಟ್ಟಿದ್ದರು. ಅದೇ ಮಳಿಗೆಗೆ ಬಂದಿದ್ದ ಓರ್ವ ಗ್ರಾಹಕ ಇದನ್ನು ಗಮನಿಸಿ, ಮೈಕಲ್ ವ್ಹಾಜ್ ಅವರ ಕಣ್ತಪ್ಪಿಸಿ ಕಾರಿನ ಕೀಯನ್ನು ಉಪಾಯದಿಂದ ಎಗರಿಸಿದ್ದಾನೆ. ಕಾರಿನ ಕೀಯನ್ನು ಕಳವು ಮಾಡುತ್ತಿರುವ ದೃಶ್ಯ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

300x250 AD

ಈ ಬಗ್ಗೆ ಮೈಕಲ್ ವ್ಹಾಜ್ ಅವರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿಯನ್ನು ನೀಡಿದ್ದಾರೆ. ಕಾರಿನ ಕೀಯನ್ನು ಕದ್ದವನನ್ನು ಕೂಡಲೇ ಬಂಧಿಸಬೇಕಾಗಿದ್ದು, ಈ ಕಳ್ಳತನ ಉದ್ದೇಶಪೂರ್ವಕವಾಗಿಯೇ ಅಥವಾ ಅರಿಯದೆ ಮಾಡಿರಬಹುದೇ ಅಥವಾ ಕಾರನ್ನು ಕಳ್ಳತನ ಮಾಡುವ ಉದ್ದೇಶದಿಂದ ಕಾರಿನ ಕೀಯನ್ನು ಎಗರಿಸಿರಬಹುದೇ ಎಂಬ ಅನುಮಾನ ಮೂಡತೊಡಗಿದೆ. ಒಟ್ಟಿನಲ್ಲಿ ಈತನನ್ನು ಕೂಡಲೇ ಪತ್ತೆ ಹಚ್ಚಿ ವಶಕ್ಕೆ ಪಡೆದು ಸೂಕ್ತ ತನಿಖೆ ನಡೆಸಬೇಕಾಗಿದೆ. ಇಂದು ಮಂಗಳವಾರ ಸಂಜೆ 6:00 ಗಂಟೆಯವರೆಗೆ ಈತನ ಸುಳಿವಾಗಲಿ, ಮಾಹಿತಿಯಾಗಲಿ ಲಭ್ಯವಾಗಿಲ್ಲ. ಈ ಘಟನೆಯ ಬಗ್ಗೆ ಕಾರಿನ ಕೀಯನ್ನು ಕಳೆದುಕೊಂಡ ಮೈಕಲ್ ವ್ಹಾಜ್ ಅವರು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Share This
300x250 AD
300x250 AD
300x250 AD
Back to top