ಸಿದ್ದಾಪುರ: ತಾಲೂಕಿನ ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶದಲ್ಲಿರುವ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯ ಕು.ಶ್ರೀರಕ್ಷಾ ಚಂದ್ರಶೇಖರ ಗೌಡ ಇವಳಿಗೆ ವಿಜ್ಞಾನ ವಿಷಯದಲ್ಲಿ ಮರುಮೌಲ್ಯಮಾಪನದ ವೇಳೆಗೆ 4 ಅಂಕಗಳು ಹೆಚ್ಚು ಬಂದಿದ್ದು ಒಟ್ಟೂ-619/625 ಅಂಕ ಗಳಿಸಿ ರಾಜ್ಯಕ್ಕೆ 7 ನೆ ರ್ಯಾಂಕ್ ಭಾಜನಳಾಗಿದ್ದಾಳೆ. ಇದಲ್ಲದೆ ವಿಜ್ಞಾನ ವಿಷಯದಲ್ಲಿ 14 ಅಂಕ ಗಳಿಸಿ ಅನುತ್ತಿರ್ಣನಾಗಿದ್ದ ಕು. ಚಂದನ ಹಸ್ಲರ್ ಕೂಡ ಮರು ಮೌಲ್ಯಮಾಪನದಲ್ಲಿ 10 ಹತ್ತು ಅಂಕ ಹೆಚ್ಚಾಗಿದ್ದು ಪಾಸಾಗಿದ್ದಾನೆ. ಇದರೊಂದಿಗೆ ಪ್ರೌಢಶಾಲೆಯ ಫಲಿತಾಂಶ ಈ ಭಾರಿಯೂ ಶೇ- 100 ರಷ್ಟಾಗಿದೆ. ಇದರೊಂದಿಗೆ ಉನ್ನತ ಶ್ರೇಣಿಯಲ್ಲಿ – 6.ಪ್ರಥಮ ಶ್ರೇಣಿ – 17. ಹಾಗೂ ದ್ವಿತೀಯ ಶ್ರೇಣಿ – 3 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಈ ಮೂಲಕ ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡಿದ ಎಲ್ಲ ಗುರುವೃಂಧದವರಿಗೆ , ಡಿ.ಡಿ.ಪಿ.ಆಯ್. ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಚ್. ನಾಯ್ಕ. ಬಿ.ಆರ್.ಸಿ. ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಮ್. ಎಸ್.ಡಿ.ಎಮ್. ಸಿ ಅಧ್ಯಕ್ಷ ನರಹರಿ ಗೌಡ ಹಾಗೂ ಪದಾಧಿಕಾರಿಗಳು, ಪಾಲಕ-ಪೋಷಕರು ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಎಸ್ಎಸ್ಎಲ್ಸಿ: ಹಳ್ಳಿಬೈಲ್ ಪ್ರೌಢಶಾಲೆ 100% ಫಲಿತಾಂಶ
