Slide
Slide
Slide
previous arrow
next arrow

ಪಹಲ್ಗಾಮ್‌ ದುರ್ಘಟನೆ: ಉಗ್ರರ ನಾಶಕ್ಕೆ ಜಿತೇಂದ್ರ ಕುಮಾರ್ ತೋನ್ಸೆ ಆಗ್ರಹ

300x250 AD

ಶಿರಸಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರನ್ನು ಹತ್ಯೆ ಗೈದ ಭಯೋತ್ಪಾಧಕರ ರಾಕ್ಷಸೀ ಕೃತ್ಯ ಇಡೀ ಮಾನವ ಕುಲವೇ ದುಃಖ ಪಡುವಂತಾಗಿದೆ. ಈ ಪೈಶಾಚಿಕ ಕೃತ್ಯ ನಡೆಸಿರುವ ಉಗ್ರರರನ್ನು ಬೇರು ಸಹಿತ ನಾಶಪಡಿಸಬೇಕು ಎಂದು ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ತೋನ್ಸೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಈ ನೆಲೆದಲ್ಲಿ ಇದ್ದುಕೊಂಡು ಇಲ್ಲಿನವರಿಗೆ ದ್ರೋಹ ಎಸಗುವುದು ಎಂದಿಗು ಸರಿಯಲ್ಲ. ಭಾರತೀಯರಾದ ನಾವೆಲ್ಲರೂ ಇದನ್ನು ಖಂಡಿಸಲೇಬೇಕು. ದಾಳಿಯಲ್ಲಿ ಮೃತ ಪಟ್ಟಿರುವ ಎಲ್ಲರ ಆತ್ಮಕ್ಕೆ ಶಾಂತಿ ಲಭಿಸಲಿ, ಅವರೆಲ್ಲರ ಕುಟುಂಬದವರು ಹಾಗೂ ಬಂಧು ಮಿತ್ರರು ಈ ನೋವಿನಿಂದ ಹೊರಬರಲಿ ಮತ್ತು ಆ ಎಲ್ಲಾ ಕುಟುಂಬಗಳ ಜೊತೆಗೆ ನಾವೆಲ್ಲರೂ ನಿಲ್ಲಬೇಕು. ಉಗ್ರರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

300x250 AD
Share This
300x250 AD
300x250 AD
300x250 AD
Back to top