ಸಿದ್ದಾಪುರ: ತಾಲೂಕಿನ ಹಲಸಗಾರ ಮತ್ತು ಕಬ್ಬಿನಸರದ ದುರ್ಗಾಂಬಿಕಾ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶೃದ್ಧಾ-ಭಕ್ತಿಯಿಂದ ಜರುಗಿತು.
.ದೇವಸ್ಥಾನದ ಅರ್ಚಕ ಶ್ರೀಧರ ಭಟ್ಟ ಮಾಣಿಕ್ನಮನೆ ಅವರ ಪೌರೋಹಿತ್ಯದಲ್ಲಿ ದೇವರ ಸ್ಥಳ ಶುದ್ಧಿ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಸಾಮೂಹಿಕ ಸತ್ಯನಾರಾಯಣ ವೃತ, ದೇವಿ ಪಾರಾಯಣ, ನವಗ್ರಹ ಹವನ, ದುರ್ಗಾಹವನ, ದೇವಿಗೆ ಕುಂಕುಮಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಶಾಸಕ ಭೀಮಣ್ಣ ನಾಯ್ಕ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಹಾಗೂ ಮತ್ತಿತರ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶ್ರೀ ದುರ್ಗಾಂಬಿಕಾ ಯುವ ನಾಟ್ಯ ಸಂಘ ಹಲಸಗಾರ ಇವರಿಂದ ‘ಕಣ್ಣಿರಲ್ಲಿ ಕೈ ತೊಳೆದ ತಂಗಿ’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಇದಕ್ಕೂ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹಾರ್ಸಿಕಟ್ಟಾ ಗ್ರಾಪಂ ಮಾಜಿ ಸದಸ್ಯ ಮಧುಕೇಶ್ವರ ಹೆಗಡೆ ಮತ್ತಿಗಾರ ಹಾಗೂ ದೇವಸ್ಥಾನದ ಅರ್ಚಕ ಶ್ರೀಧರ ಭಟ್ಟ ಮಾಣಿಕ್ನಮನೆ ಉದ್ಘಾಟಿಸಿದರು. ಊರಿನ ಹಿರಿಯರಾದ ತಿಮ್ಮಪ್ಪ ಡಿ.ನಾಯ್ಕ ಅಧ್ಯಕ್ಷತೆವಹಿಸಿದ್ದರು.
ಎಂ.ಎಸ್.ಹೆಗಡೆ ಕಲ್ಮನೆ, ಉಮಾಪತಿ ನಾಯ್ಕ ತೌಡತ್ತಿ, ಅಶೋಕ ಎಂ.ಪೂಜಾರಿ ಹಳಿಯಾಳ, ಸುರೇಶ ರಾಮಾ ನಾಯ್ಕ,ಸುರೇಶ ನಾಯ್ಕ ತೆಂಗಿನಮನೆ, ಕೆರಿಯಾ ದೇವಾಸ, ಮಂಜುನಾಥ ನಾಯ್ಕ, ಜಿ.ಬಿ.ನಾಯ್ಕ, ಮಂಜುನಾಥ ರಾಮಾ ನಾಯ್ಕ, ಬಂಗಾರೇಶ್ವರ ಎಂ.ನಾಯ್ಕ, ರಾಮಚಂದ್ರ ಎಸ್.ನಾಯ್ಕ, ಲಕ್ಷ್ಮಣ ಆರ್.ನಾಯ್ಕ, ಚಿದಾನಂದ ಅಣ್ಣಪ್ಪ ನಾಯ್ಕ, ಇತರರಿದ್ದರು.
ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮನೋಜ್ ಎಸ್.ನಾಯ್ಕ ಹಾರ್ಸಿಕಟ್ಟಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸವಿತಾ ಹಾಗೂ ಪ್ರೇಮಾ ನಾಯ್ಕ ಸಂಗಡಿಗರು ಪ್ರಾರ್ಥನೆ ಹಾಡಿದರು. ಸತೀಶ ನಾಯ್ಕ ಹಲಸಗಾರ ತರಳಿ ವಂದಿಸಿದರು. ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.