ಹೊನ್ನಾವರ: ಅನಾದಿ ಕಾಲದಿಂದಲೂ ಸಾಗುವಳಿ ಅರಣ್ಯ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ಇತ್ತಿಚೀನ ದಿನಗಳಲ್ಲಿ ಗಿಡ ನೇಡಲು ಗುಂಡಿ ಮತ್ತು ಅಗಳ ತೆಗೆದು ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟು ಮಾಡಿದ್ದಾರೆ ಎಂದು ಅರಣ್ಯವಾಸಿಗಳು ಅರಣ್ಯ ಸಿಬ್ಬಂಧಿಗಳ ಮೇಲೆ ಆರೋಪಿಸಿದ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೀಯೋಗವು ಏ.೨೪ ಗುರವಾರ ಮುಂಜಾನೆ ೭ ಗಂಟೆಯಿಂದ ಹೊನ್ನಾವರ ತಾಲೂಕಿನ ವಿವಿಧ ಕ್ಷೇತ್ರದಲ್ಲಿ ಗುಂಡಿ ತೆಗಯಲಾಗಿದೆ ಎನ್ನಲಾದ ಅರಣ್ಯವಾಸಿ ಕ್ಷೇತ್ರಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಸಂಚಾಲಕರಾದ ರಾಮ ಮರಾಠಿ ಯಲಕೋಟಗಿ ಮತ್ತು ಮಹೇಶ ನಾಯ್ಕ ಕಾನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ನೀಯೋಗವು ಗುಂಡಿ ತೆಗೆಯಲಾದ ಕ್ಷೇತ್ರಕ್ಕೆ ಭೇಟಿ ನೀಡಲಾಗುವುದು ಮತ್ತು ಸ್ಥಳ ಪರಿಶೀಲನೆಯ ನಂತರ ಸಂಬಂಧಿಸಿದ ಅರಣ್ಯಾಧಿಕಾರಿಗಳೊಂದಿಗೆ ಮದ್ಯಾಹ್ನ ೧೦.೩೦ ಗಂಟೆಗೆ ಚರ್ಚಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ ಅರಣ್ಯ ಸಿಬ್ಬಂಧಿಗಳು ವಿನಾ: ಕಾರಣ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರ ಆತಂಕ ಉಂಟು ಮಾಡಿರುವುದು ಘಟನೆ ಪರೀಶೀಲಿಸಿ ಹೋರಾಟದ ಮುಂದಿನ ನಿರ್ಧಾರ ತೀರ್ಮಾನಿಸುವ ಉದ್ದೇಶದಿಂದ ಹಾಗೂ ಸೌಹಾರ್ದಿತವಾಗಿ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ನಿಯೋಗವು ಸ್ಥಳಕ್ಕೆ ಮತ್ತು ಹಿರಿಯ ಅಧಿಕಾರಿಗಳಿಗೆ ಭೇಟಿ ನೀಡಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.