Slide
Slide
Slide
previous arrow
next arrow

ಆರ್.ಇ.ಎಸ್. ಪ್ರೌಢಶಾಲೆಯಲ್ಲಿ ವಿಜ್ಞಾನ, ಗಣಿತ ಪ್ರಯೋಗಾಲಯ ಉದ್ಘಾಟನೆ

300x250 AD

ಹೊನ್ನಾವರ:  ತಾಲೂಕಿನ‌  ಹಳದೀಪುರದ ಆರ್.ಇ.ಎಸ್. ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಉದ್ಘಾಟನಾ ಸಮಾರಂಭ ಶಾಲಾ ಸಭಾಭವನದಲ್ಲಿ ಇತ್ತೀಚಿಗೆ ನಡೆಯಿತು. 

ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಆರ್.ಇ.ಎಸ್. ನಿವೃತ್ತ ಮುಖ್ಯಾಧ್ಯಾಪಕ ಸತ್ಯನಾರಾಯಣ .ವಿ. ಹಾಸ್ಯಗಾರ 1951ರಲ್ಲಿ ಆರಂಭವಾದ ಈ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಹಳ್ಳಿಗಾಡಿನ ವಿದ್ಯಾರ್ಥಿಗಳು ವಿಜ್ಞಾನ ಪ್ರಯೋಗಾಲಯದ ಸದುಪಯೊಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಗಂಗಾಧರ.ಸಿ.ನಾಯ್ಕ
ಮಾತನಾಡಿ ಇಂದು ನಮ್ಮ ವಿದ್ಯಾಲಯದಲ್ಲಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಸ್ಥಾಪಿತವಾಗಿದ್ದು ವಿದ್ಯಾರ್ಥಿಗಳು ಮುಂದಿನ ತರಗತಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ವಿಜ್ಞಾನಿಗಳಾಗಿ ದೇಶದಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದಿನ ಭವಿಷ್ಯ ಉಜ್ವಲಗೊಳಿಸಿಕೊಳ್ಳವತ್ತ ಸಾಗಬೇಕೆಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಮಚಂದ್ರ  ಹಾಸ್ಯಗಾರ,ವರದ ಎಸ್.ಹಾಸ್ಯಗಾರ, ಸುರೇಂದ್ರ .ಯು.ಕುಲಕರ್ಣಿ ,  ಇವರುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ದಾನಿಗಳ ಸಹಕಾರದಿಂದ ಇದುವರೆಗು 19 ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದೇವೆ ವಿದ್ಯಾರ್ಥಿಗಳಿಗೆ ಮುಂದಿನ ಕಲಿಕೆಗೆ ಅನುಕೂಲವಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೇ ವೇಳೆ ಈ ದಾನಿಗಳನ್ನು ಸನ್ಮಾನಿಸಲಾಯಿತು.

 ಆರ್.ಇ. ಸೊಸೈಟಿ ಕಾರ್ಯದರ್ಶಿ ರಾಜೀವ್ .ಜಿ. ಶ್ಯಾನಭಾಗ ,  ಶ್ರೀ ಚನ್ನಕೇಶವ ಪ್ರೌಢ ಶಾಲೆ ಮುಖ್ಯಾದ್ಯಾಪಕ ಎಲ್.ಎಂ.ಹೆಗಡೆ,  ಕಡತೋಕಾ  ಜನತಾ ವಿದ್ಯಾಲಯದ ಪ್ರಾಂಶುಪಾಲೆ  ಶ್ರೀಮತಿ ದುರ್ಗಮ್ಮ ಭಾಗವಹಿಸಿದ್ದರು.

300x250 AD

ಆರ್ ಈ ಸೊಸೈಟಿ ಆಡಳಿತ ಮಂಡಳಿಯ ಸರ್ವಸದಸ್ಯರು  ಉಪನ್ಯಾಸಕ ವರ್ಗದವರು , ಪ್ರೌಢಶಾಲೆಯ ಶಿಕ್ಷಕ, ಶಿಕ್ಷಕೇತರ  ಸಿಬ್ಬಂದಿ ವರ್ಗದವರು ,  ಹಳದೀಪುರದ ಊರ ನಾಗರಿಕರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಆರ್ ಈ ಎಸ್ ಪ್ರೌಢ ಶಾಲೆಯ ಮುಖ್ಯಾದ್ಯಾಪಕ ಎಸ್.ಎಚ್ .ಪೂಜಾರ ಸ್ವಾಗತಿಸಿದರು.
ದೈಹಿಕ ಶಿಕ್ಷಕ   ಎಂ .ಜಿ .ಶೆಟ್ಟಿ ವಂದಿಸಿದರು. ಕನ್ನಡ ಶಿಕ್ಷಕ ಚಂದ್ರಪ್ಪ ಅಣ್ಣಪ್ಪನವರ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top