Slide
Slide
Slide
previous arrow
next arrow

ಸಂಗೀತ-ಸಾಧಕರ ಸಮಾಗಮವಾದ ಆರೋಹಿಯ ಸಂಗೀತ ಸಮಾರೋಹ

300x250 AD

ಶಿರಸಿ: ಶಿಕ್ಷಣ, ತಾಳ್ಮೆ, ಸಾಮಾಜಿಕ ಬದ್ದತೆ ಸಾಧಕನ ಸ್ವತ್ತಾಗಿರಬೇಕು. ಕಠಿಣ ಪರಿಶ್ರಮ ಸಾಧನೆಯ ಹಾದಿಯಾಗಿರುತ್ತದೆ. ಸಾಧನೆಯನ್ನು ಗುರುತಿಸಿದ ಆತ್ಮೀಯರ ಅನುಬಂಧ ಯಾವತ್ತೂ ಮರೆಯಲಾರೆ ಎಂದು ಇಂಜಿನಿಯರ್ ಡಾ.ಮನು ಹೆಗಡೆ ಶಿರಸಿಯ ನೆಮ್ಮದಿಯ ರಂಗಧಾಮದಲ್ಲಿ ಆರೋಹಿ ತ್ರೈವಾರ್ಷಿಕ ಸಮಾರೋಹದಲ್ಲಿ ಆರೋಹಿ ಸಾಧಕ ಪ್ರಶಸ್ತಿಯನ್ನು ಪಡೆದು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜಸೇವಕ ಅನಂತಮೂರ್ತಿ ಹೆಗಡೆ ಮಾತನಾಡುತ್ತಾ ಪ್ರತಿಭೆಗಳು ಸ್ವಂತ ಊರಿನಲ್ಲಿ ಬೆಳಗಬೇಕು,ಬೆಳಗುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವುದು ಅತ್ಯವಶ್ಯ. ಆರೋಹಿಯ ಈ ಕಾರ್ಯ ಅತ್ಯಂತ ಔಚಿತ್ಯಪೂರ್ಣ. ಇಂತಹ ಸಂಘಟನೆಗಳಿಗೆ ಸಾರ್ವಜನಿಕರ ಸಾಕಷ್ಟು ಪ್ರೋತ್ಸಾಹ ಅತ್ಯಗತ್ಯ ಎಂದು ತಮ್ಮ ಆಶಯ ನುಡಿಗಳಲ್ಲಿ ನುಡಿದರು.

ಅತಿಥಿಗಳಾಗಿ ಮಾತನಾಡಿದ ಕೆ. ಬಿ.ಲೊಕೇಶ ಹೆಗಡೆ ಅವರು ಸಮಾಜದ ಸ್ವಾಸ್ಥ್ಯ ಕಾಪಾಡುವ ಸಂಸ್ಕಾರ ಹೆಚ್ಚಿಸುವ ಇಂತಹ ಸಂಘಟನೆಗಳನ್ನು ಸಲಹುವ ಕೆಲಸ ಅತ್ಯಗತ್ಯ ಎಂದು ನುಡಿದರು.

ಆರೋಹಿಯ ತ್ರೈವಾರ್ಷಿಕ ಸಮಾರೋಹದ ಎರಡನೇ ದಿನ ಗುರುಮಾತೆ ದೀಪ ಶಶಾಂಕ್ ಇವರ ನೇತೃತ್ವದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು. ಶಿವರಾಂ ಹೆಗಡೆ ತಬಲಾದಲಿ ಶಂಭು ಹೆಗಡೆ ಸೋಮನಹಳ್ಳಿ ತಾಳದಲ್ಲಿ ಸಹಕರಿಸಿದರು.

300x250 AD

ಇದೇ ವಿದ್ಯಾಲಯದ ವಿದ್ಯಾರ್ಥಿ ಕುಮಾರಿ ಸಹನ ಬಾಲಚಂದ್ರ ಭಟ್ ಇವಳನ್ನು ಹಿಂದುಸ್ತಾನಿ ಗಾಯನ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗಾಗಿ ಸನ್ಮಾನಿಸಲಾಯಿತು. ಇಂಜಿನಿಯರ್ ಡಾಕ್ಟರ್ ಮನು ಹೆಗಡೆ ಇವರನ್ನು ಆರೋಹಿ ಸಾಧಕ ಪ್ರಶಸ್ತಿಯ ಮೂಲಕ ಗೌರವಿಸಲಾಯಿತು. ಆರೋಹಿ ಸಂಸ್ಥೆಯ ಅಧ್ಯಕ್ಷರಾದ ಶಶಾಂಕ ಹೆಗಡೆ ಸರ್ವರನ್ನು ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿ ಕೊನೆಯಲ್ಲಿ ಸರ್ವರ ಉಪಕಾರ ಸ್ಮರಿಸಿದರು. ಪಾಲಕರಾದ ಶ್ರೀಮತಿ ಶಿಲ್ಪಾ ಹೆಗಡೆ ಹಾಗೂ ಶ್ರೀಮತಿ ರೂಪ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

ದಿನದ ಕೊನೆಯ ಸಂಗೀತ ಗೋಷ್ಠಿಯಾಗಿ ಸ್ವರಾತ್ಮ ಗುರುಕುಲದ ಪ್ರಾಚಾರ್ಯರಾದ ಡಾ. ಹರೀಶ್ ಹೆಗಡೆ ನೇತೃತ್ವದಲ್ಲಿ ಅಪರೂಪದ ವಿನೂತನ “ರಾಗಾಂತರಂಗ ಗಾನಯಾನ” ಕಾರ್ಯಕ್ರಮ ನಡೆಯಿತು. ರಾಗ್ ಯಮನ್, ಮಾಲ್ ಕೌಂಸ್ ಮತ್ತು ಭೈರವಿಯಲ್ಲಿ ಛೋಟಾ ಕ್ಯಾಲ್, ಬಡಾಖ್ಯಾಲ್, ಭಜನ್, ಅಭಂಗ್, ವಚನ, ತರಾನಾ, ಭಾವಗೀತೆ,ಚಲನಚಿತ್ರ ಗೀತೆಗಳ ಗಾಯನ ಪ್ರಸ್ತುತಪಡಿಸಲಾಯಿತು. ಡಾ. ಹರೀಶ್ ಹೆಗಡೆ, ಕವಿತಾ ಹೆಗಡೆ ದೀಪ ಶಶಾಂಕ್,ದೀಪ್ತಿ ಭಟ್, ಶ್ರೀಹರಿ ಕುಲಕರ್ಣಿ,ವಿಶಾಲ್ ಕಟ್ಟಿ ಗಾಯನ ಸುಧೆಯನ್ನು ಹರಿಸಿದರು. ಸತೀಶ್ ಹೆಗ್ಗಾರ್ ಸಂವಾದಿನಿಯಲಿ ಅದ್ಭುತವಾದ ಪ್ರದರ್ಶನ ನೀಡಿದರು, ಗಣೇಶ್ ಗುಂಡ್ಕಲ್ ತಬಲಾ ನಾದ ವೈವಿಧ್ಯ ಹೊರಡಿಸಿ ಕರತಾಡನ ಗಿಟ್ಟಿಸಿದರು. ನೆಮ್ಮದಿಯ ರಂಗಧಾಮದಲ್ಲಿ ಸೇರಿದ ಪ್ರೇಕ್ಷಕರು ಅಪರೂಪದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಎದ್ದುನಿಂತು ಎಲ್ಲಾ ಯುವ ಕಲಾವಿದರನ್ನು ಗೌರವಿಸಿದರು. ಒಂದು ಅಪರೂಪದ ವೈಶಿಷ್ಟ್ಯ ಪೂರ್ಣ,ವ್ಯವಸ್ಥಿತ ಎರಡು ದಿನಗಳ ಸಂಗೀತ ಸಮಾರೋಹ ಆರೋಹಿ ಬಳಗದ ವತಿಯಿಂದ ಮಾದರಿಯಾಗಿ ಸಂಘಟಿತವಾಯಿತು.

Share This
300x250 AD
300x250 AD
300x250 AD
Back to top