ಹಳಿಯಾಳ : ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪ್ರಥಮ ವರ್ಧಂತಿ ಆಚರಣೆಯ ನಿಮಿತ್ತ ನಗರದ ಶ್ರೀ ರಾಮ ಮಂದಿರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು, ಹಿರಿಯರಾದ ವಿ.ಡಿ.ಹೆಗಡೆ ವಿಶೇಷ ಪೂಜೆ ಸಲ್ಲಿಸಿದರು.
ಅಯೋಧ್ಯೆಯ ಶ್ರೀರಾಮನ ಮಂದಿರವು ಉದ್ಘಾಟನೆಯೊಂದಿಗೆ ಪುನರುಜ್ಜೀವನಗೊಂಡಿದೆ. ಈ ಭವ್ಯತೆ ವಿಶ್ವದಾದ್ಯಂತ ಆಕರ್ಷಣೆಯಾಗಿದೆ ಮತ್ತು ಸನಾತನಿಗಳ ಆಧ್ಯಾತ್ಮಿಕತೆಯನ್ನು ಮತ್ತಷ್ಟು ಬಲಪಡಿಸಿದೆ. ಪ್ರಭು ಶ್ರೀರಾಮನ ಕೃಪೆಯಿಂದ ಎಲ್ಲೆಡೆ ಸುಭಿಕ್ಷತೆ ಹರಡಲಿ ಮತ್ತು ಮಾನವಕುಲದ ಕಲ್ಯಾಣವಾಗಲಿ. ಭಕ್ತರ ಹೃದಯದಲ್ಲಿ ಶ್ರೀರಾಮನ ಮೇಲೆ ಅನಂತ ಭಕ್ತಿ ಮನೆ ಮಾಡಿದೆ ಎಂದು ವಿ.ಡಿ.ಹೆಗಡೆ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಮಂಗೇಶ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಘಟಕಾಂಬಳೆ, ಸೊಸೈಟಿ ನಿರ್ದೇಶಕರಾದ ಉದಯ ಜಾಧವ, ಪ್ರಮುಖರಾದ ಶಿವು ಶೆಟ್ಟರ, ಆಕಾಶ ಉಪ್ಪಿನ, ಗಿರಿ ಕುಟುಂಬಸ್ಥರು, ಭಕ್ತಾದಿಗಳು ಮೊದಲಾದವರು ಉಪಸ್ಥಿತರಿದ್ದರು.