ದಾಂಡೇಲಿ : ನಗರದ ಟೌನಶಿಪ್’ನ ಗಾರ್ಡನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ಗಾಂಧಿನಗರದ ನಿವಾಸಿಯಾಗಿರುವ 23 ವರ್ಷ ವಯಸ್ಸಿನ ಆಸೀಫ್ ಅಬ್ದುಲ್ ರಜಾಕ ವಾಗೀನಗೇರಿ ಎಂಬಾತನೆ ಗಾಂಜಾ ಸೇವನೆ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಯುವಕನಾಗಿದ್ದಾನೆ. ನಗರ ಠಾಣೆಯ ತನಿಕಾ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಅವರು ಪೊಲೀಸರ ಜೊತೆ ದಾಳಿ ನಡೆಸಿ ಈತನನ್ನು ವಶಕ್ಕೆ ಪಡೆದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈತನ ಮೇಲೆ ಕಲಂ 27(ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.