ದಾಂಡೇಲಿ : ನಗರದ ವಿವಿದೆಡೆಗಳಲ್ಲಿ ಪೊಲೀಸರಿಂದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆ ನಡೆದಿದ್ದು, ತಡ ರಾತ್ರಿಯ ವೇಳೆ ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುತ್ತಿದ್ದ ಯುವಕರಿಗೆ ತಕ್ಕಮಟ್ಟಿಗೆ ಚಳಿ ಬಿಡಿಸಿ ಎಚ್ಚರಿಕೆಯನ್ನು ನೀಡುವ ಕಾರ್ಯ ನಡೆಯುತ್ತಿದೆ.
ಮಾದಕ ದ್ರವ್ಯ ಸೇವನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಸೇವನೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಪಿಎಸ್ಐ ಕಿರಣ್ ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸರ ತಂಡ ನಗರದ ಹಳೆ ದಾಂಡೇಲಿ, ಗಾಂಧಿನಗರ, ಮಾರುತಿ ನಗರ, ಅಂಬೇವಾಡಿ ಮೊದಲಾದ ಪ್ರದೇಶಗಳಿಗೆ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯನ್ನು ನಡೆಸಿ ಸಾರ್ವಜನಿಕ ಸ್ಥಳ ಹಾಗೂ ಶಾಲೆಗಳ ಆವರಣದಲ್ಲಿ ತಡ ರಾತ್ರಿಯವರಿಗೆ ಹರಟೆ ಹೊಡೆಯುತ್ತಿದ್ದ ಯುವಕರಿಗೆ ಬುದ್ಧಿ ಮಾತು ಹೇಳಿ, ಎಚ್ಚರಿಕೆಯನ್ನು ನೀಡಲಾಗಿದೆ.