ಸಿದ್ದಾಪುರ; ಸಿದ್ದಾಪುರದ ಸ್ಥಳೀಯ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ‘ಭಾರತದ ಉಜ್ವಲ ಭವಿಷ್ಯಕ್ಕಾಗಿ ಯುವಶಕ್ತಿ’ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಸುದರ್ಶನ್ ಪಿಳ್ಳೆ ಉದ್ಘಾಟಿಸಿ ಹಿರಿಯರ ಮಾರ್ಗದರ್ಶನ ಹಾಗೂ ಗುರು ಮತ್ತು ಗುರಿ ಎರಡು ಜೊತೆಯಲ್ಲಿ ಇರಬೇಕು.ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ ಎಂದರು. ದಿಕ್ಸೂಚಿ ಭಾಷಣ ಮಾಡುತ್ತಾ ರಾಜಯೋಗಿನಿ ಬಿ.ಕೆ.ವೀಣಾಜಿ, ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಸ್ಪೊರ್ತಿ, ಯುವಶಕ್ತಿಗೆ ಸನಾತನ ಶಕ್ತಿ ಸೇರಬೇಕು.ಹಿರಿಯರು ಬೆಳೆಯುವ ಮನಸ್ಸಿಗೆ ಮಾದರಿ,ಯುವ ಮನಸ್ಸುಗಳು ಗಟ್ಟಿಯಾಗಿದ್ದಾಗ ಸಮಾಜಕ್ಕೆ ಕಾಣಿಕೆ ಆಗಿರುತ್ತಾರೆ ಎಂದರು. ವಿಶೇಷ ಆಹ್ವಾನಿತರು ತಮ್ಮ ತಮ್ಮ ಚಿಂತನೆಯನ್ನು ತೆರೆದಿಟ್ಟರು.
ನಂದನ್ ಬೋರಕರ್, ಸೋಮಶೇಖರ ಗೌಡರ್, ವಿನಾಯಕ ಶೇಟ್, ಪ್ರಶಾಂತ್ ಶೇಟ್, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ಶಕ್ತಿಗೆ ಸ್ಪೂರ್ತಿದಾಯಕ ಚಿಂತನೆ ತಿಳಿಸಿದ್ದಾರೆ. ನಾಗರಾಜ ಭಟ್ ಅಧ್ಯಕ್ಷರಾಗಿ ಸಿದ್ದಾಪುರದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತಾ, ನಮ್ಮಲ್ಲಿಯ ಸಾಧಕರು ಹೋರಗಡೆ ಬಹಳ ಸೇವೆಯನ್ನು ನೀಡಿ ಗುರುತಿಸಿ ಕೊಂಡಿದ್ದಾರೆ ಎಂದರು. ಅಯ್ಯಪ್ಪ ಸ್ವಾಮಿಯ ಮಾಲಾಧಾರಿ ಯುವಕರನ್ನು ಗೌರವಿಸಲಾಯಿತು. ಕುಮಾರಿ ಅಮೂಲ್ಯ ಬಂಢಾರಿ ಯಕ್ಷನೃತ್ಯ ಮಾಡಿದರು.ಸ್ವಾಗತ ಭಾಷಣ ಸೋಮಶೇಖರ ಗೌಡರ್ ಹಾಗೂ ನಿರೂಪಣೆಯನ್ನು ಬಿ. ಕೆ. ದೇವಕಿ ನೆರೆವೇರಿಸಿದರು