Slide
Slide
Slide
previous arrow
next arrow

ಜ.22ಕ್ಕೆ ಕೇಶವ ಕೊಳಗಿಗೆ ಗೌರವ ಸನ್ಮಾನ: ಯಕ್ಷಗಾನ ಪ್ರದರ್ಶನ

300x250 AD

ಸಿದ್ದಾಪುರ: ಪಟ್ಟಣದ ನೆಹರೂ ಮೈದಾನದಲ್ಲಿ ಜ.22 ಬುಧವಾರದಂದು, ರಾತ್ರಿ ,,9.30ಕ್ಕೆ ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ 2024-25 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೇಶವ ಹೆಗಡೆ ಯಕ್ಷಗಾನ ಭಾಗವತರು ಕೊಳಗಿ ಇವರಿಗೆ ಸಮಸ್ತ ಕಲಾ ಪೋಷಕರ ವತಿಯಿಂದ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ನಂತರ 10.00 ಗಂಟೆಯಿಂದ ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಮೇಳವಾದ ಸಾಲಿಗ್ರಾಮ ಮೇಳದವರಿಂದ ದೇವದಾಸ ಈಶ್ವರ ಮಂಗಲವಿರಚಿತ ಈ ವರ್ಷದ ಹಾಸ್ಯಭರಿತ ನೂತನ ಕಥಾನಕ ಶುಭಲಕ್ಷಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬಹಳ ವರ್ಷಗಳ ನಂತರ ನೂತನ ಕಥಾನಕದಲ್ಲಿ ಕೇಶವ ಹೆಗಡೆ ಕೊಳಗಿ ಇವರು ಭಾಗವತರಾಗಿ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಕಾರ್ಯಕ್ರಮದ ಸಂಘಟಕರಾದ ಸತೀಶ ಹೆಗಡೆ ಬೈಲಳ್ಳಿ, ಕೇಶವ ಹೆಗಡೆ ಕಿಬ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top