ಯಲ್ಲಾಪುರ : ಆಧ್ಯಾತ್ಮ ಭಾರತದ ಆತ್ಮ . ಭಾರತೀಯ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದರೆ ಇಲ್ಲಿನ ಆಧ್ಯಾತ್ಮವೇ ಕಾರಣವಾಗಿದೆ ಎಂದು ವಿಭಾಗೀಯ ಬೌದ್ಧಿಕ ಪ್ರಮುಖ ಮಧು ಕಿರುಗಾರ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನದ ಬೌದ್ಧಿಕದಲ್ಲಿ ಅವರು ವಕ್ತಾರರಾಗಿ ಮಾತನಾಡಿದರು.
ಆಧ್ಯಾತ್ಮದಲ್ಲಿ ವಿಜ್ಞಾನ ಆರೋಗ್ಯ ಸೇರಿದಂತೆ ಎಲ್ಲವನ್ನು ಒಳಗೊಂಡಿದೆ ಇದೆ. ಭಾರತೀಯ ಸಂಸ್ಕೃತಿಯೇ ವಸುದೈವ ಕುಟುಂಬಕಂ ಎನ್ನುವುದು. ಭಾರತವೇ ಒಂದು ಕುಟುಂಬ. ಮನೆಯಲ್ಲಿ ಯಾವುದೇ ದೇವರನ್ನು ಪೂಜೆ ಮಾಡು, ಎಲ್ಲರೂ ಒಂದೇ ಕುಟುಂಬದವರಾಗಿ ಪರಮ ವೈಭವದೆಡೆಗೆ ಈ ದೇಶವನ್ನು ಕೊಂಡೊಯ್ಯುತ್ತೇನೆ ಎಂಬ ಭಾವನೆ ನಮ್ಮಲ್ಲಿರಬೇಕು. ನಾವೆಲ್ಲ ಒಂದಾಗಿ ದೇಶ ಕಟ್ಟಬೇಕು.ನಿತ್ಯ ಶಾಖೆಯಿಂದ ಇದು ಸಾಧ್ಯವಾಗಲಿದೆ. ಕಳೆದ ನೂರು ವರ್ಷಗಳಿಂದ ಈ ಕಾರ್ಯವನ್ನು ಸಂಘ ಮಾಡುತ್ತಿದೆ ಎಂದರು. ಜಿಲ್ಲಾ ಕಾರ್ಯವಾಹ ಗೋಪಾಲಕೃಷ್ಣ ಬರಗದ್ದೆ ವೇದಿಕೆಯಲ್ಲಿದ್ದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಭಗವಾಧ್ವಜದೊಂದಿಗೆ ಆಕರ್ಷಕ ಪಥ ಸಂಚಲನ ನಡೆಯಿತು.