ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಪ್ರತಿ ತಿಂಗಳ ಮೂರನೇಯ ಶನಿವಾರದಂದು ನಡೆಯುವ ಸಂಭ್ರಮ ಶನಿವಾರವನ್ನು ಸಂಭ್ರಮದಿಂದ ಆಯೋಜಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ ಮಾರ್ಗದರ್ಶನದಲ್ಲಿ ಇಂದಿನ ದೈನಂದಿನ ಜೀವನದಲ್ಲಿ ಯುವ ಪೀಳಿಗೆಯು ಅಸುರಕ್ಷಿತ ರಸ್ತೆ ನಿಯಮಗಳನ್ನು ಅನುಸರಿಸಿ ವಾಹನ ಅಪಘಾತದಿಂದ ಸಾವು ನೋವುಗಳಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬುವಂತೆ ವಿಧ್ಯಾರ್ಥಿ ಜೀವನದಲ್ಲೇ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಚಿತ್ರ ಬರೆಯುವುದು,ಚರ್ಚಾಕೂಟ, ನನ್ನ ಅನುಭವ, ಬರವಣಿಗೆಯ ಮೂಲಕ ಅನುಭವ, ವಿದ್ಯಾರ್ಥಿಯಾಗಿ ನನ್ನ ಪಾತ್ರ,ಅಸುರಕ್ಷಿತ ರಸ್ತೆ ನಿಯಮ ಪಾಲನೆಯಿಂದ ಆಗುವ ಅನಾಹುತಗಳು,ಸಂಚಾರಿ ಸಂಕೇತ ದೀಪಗಳ ನಿಯಮಗಳನ್ನು ಅನುಸರಿಸುವ ಬಗ್ಗೆ, ಹಾರ್ನ್ ಬಳಕೆ ಮಾಡುವ ಬಗ್ಗೆ,ವಯಸ್ಕರು ಮಾತ್ರ ವಾಹನ ಚಲಾಯಿಸುವ ಬಗ್ಗೆ,ವಾಹನ ಚಾಲನೆ ಮಾಡುವಾಗ ಸೀಟ್ ಬೇಲ್ಟ್, ಹೆಲ್ಮೆಟ್ ಹಾಕುವುದು,ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡದಿರುವ ಬಗ್ಗೆ,ಕಾಲ ಕಾಲಕ್ಕೆ ವಾಹನಗಳ ದಾಖಲೆಗಳನ್ನು ಮಾಡಿಕೊಳ್ಳುವಿಕೆ, ಅಪಘಾತ ವಲಯ ಒಳಗೊಂಡಂತೆ ನಿಧಾನವಾಗಿ ವಾಹನ ಚಲಾಯಿಸುವ ಬಗ್ಗೆ,ಶಾಲೆ,ಆಸ್ಪತ್ರೆ,ರೈಲ್ವೆ ಹಳಿಗಳ, ಜನದಟ್ಟಣೆಯ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ,ಪಾದಚಾರಿ ಮಾರ್ಗಗಳನ್ನು ಬಳಕೆ ಮಾಡುವುದರ ಬಗ್ಗೆ,ಆಂಬುಲೆನ್ಸ್ ಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡುವದರ ಬಗ್ಗೆ,ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸುವುದರ ಬಗ್ಗೆ ವಿದ್ಯಾರ್ಥಿಗಳ ಪಾತ್ರ ಕುರಿತು ವಿವರವಾಗಿ ಚರ್ಚಿಸಿ, ಶಿಕ್ಷಕರ ಸಹಕಾರದಲ್ಲಿ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು. ಶಿಕ್ಷಕರು ಮಾರ್ಗದರ್ಶನ ಮಾಡಿದರು. ಸಹ ಶಿಕ್ಷಕರಾದ ಭುವನೇಶ್ವರ ಮೇಸ್ತಾ, ಶೋಭಾ,ಹೇಮಾ, ಹನುಮಂತ ಕೊರಗರ ಸಹಕರಿಸಿದರು.