Slide
Slide
Slide
previous arrow
next arrow

ಗಜ಼ಲ್‌ನ ಆಳ, ಅಗಲದ ವಿಮರ್ಶೆಗಳ ಕೊರತೆಯಿಂದ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ: ಜಿ.ಸು. ಬಕ್ಕಳ

300x250 AD

ಶಿರಸಿ: ಸಾಹಿತ್ಯ ಸಂಚಲನ ಶಿರಸಿ(ಉ.ಕ.) ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿರಿಸಿ ಜಿಲ್ಲಾ ಉತ್ತರ ಕನ್ನಡ ಮತ್ತು ನೆಮ್ಮದಿ ಓದುಗರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ಅವಲೋಕನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಗಜ಼ಲ್ ಕವಿ, ಕ.ಸಾ.ಪ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ “ಇಂದು ಗಜ಼ಲ್‌ಗಳಿಗೆ ಸಿಗಬೇಕಾದ ಮಾನ್ಯತೆ ಸಿಗದಿರುವುದು ವಿಷಾದನೀಯವಾಗಿದೆ ಇದಕ್ಕೆ ಗಜ಼ಲ್ ನ ಆಳ, ಅಗಲ, ವಿಸ್ತಾರದ ವಿಮರ್ಶೆಯನ್ನು ವಿಮರ್ಶಕರು ಮಾಡದಿರುವ ಕಾರಣ ಇವು ಮುನ್ನೆಲೆಗೆ ಬಂದಿಲ್ಲ. ಇದೊಂದು ಕವನ ಪ್ರಕಾರವಾಗಿದ್ದು, ಕೇವಲ ಪ್ರೀತಿ, ಪ್ರೇಮ, ವೈರಾಗ್ಯಗಳ ದ್ಯೋತಕವಾಗಿರದೆ ಅನೇಕ ಭಾವಗಳಿಗೆ ಅನ್ವಯಿಸಿ ರಚಿಸಬಹುದಾಗಿದೆ ಅದರೆ ಹಾಡಲು ಬರುವಂತಾಗಿ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುವಂತಾಗಬೇಕು” ಎಂದು ನುಡಿದರು.

“ಭರವಸೆಯ ಬೆಳಕು” ಪುಸ್ತಕವನ್ನು ಅವಲೋಕನ ಮಾಡಿದ ಮಂಗಳಗೌರಿ ಭಟ್ಟರು ‘ಇದೊಂದು ಸಮಗ್ರ ಕಾವ್ಯವಾಗಿದೆ. ಕೃತಿಕಾರನ ಅಂತರಾಳದ ಸ್ಪೂರ್ತಿಯ ಸಾಲುಗಳು ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ ಎಂದರು.

“ಭರವಸೆಯ ಬೆಳಕು” ಕೃತಿಕಾರ ಕೃಷ್ಣ ಪದಕಿ ಅವರು ಮಾತನಾಡಿ ಕವಿ ಹೃದಯವನ್ನು ಜಾಗೃತಗೊಳಿಸುವ ಗಟ್ಟಿ ಕಾವ್ಯವೆಂದು ನನ್ನ ಅನಿಸಿಕೆಯಾಗಿದೆ. ಜೀವನಾನುಭವ, ಓದು, ಸತತ ಅಧ್ಯಯನದಿಂದ ಇದು ಸಾಧ್ಯ. ಕರೋನಾ ಸಮಯದಲ್ಲಿ ಮುಚ್ಚಿದ ಬಾಗಲು ತೆರೆಯುವಂತಾಯಿತು. ಪ್ರತಿಭೆಗೆ ಪ್ರೇರಣೆ ಬೇಕು ನೆನಪುಗಳು ಸದಾ ಜಾಗೃತವಾಗಿದ್ದರೆ ಸಾಹಿತ್ಯದ ಸಿದ್ಧಿ, ಸಮೃದ್ಧಿ ಸಾಧ್ಯವೆಂದರು.

“ಮಹಿ ಗಜ಼ಲ್” ಪುಸ್ತಕದ ಅವಲೋಕನವನ್ನು ಮಾಡಿದ ರೋಹಿಣಿ ಹೆಗಡೆ ‘ಇದು ತಣ್ಣನೆಯ ಭಾವನೆಗಳನ್ನು ಅದುಮಿಟ್ಟುಕೊಳ್ಳದೆ ಬಿಚ್ಚಿಡುತ್ತದೆ. ಗುರು ಪರಂಪರೆಯಲ್ಲಿ ಬಂದಾಗ ಮಾತ್ರ ಇದು ಸಾಧ್ಯವೆಂದು ಅತ್ಯಂತ ವಿಸ್ತಾರವಾಗಿ ಅರ್ಥಪೂರ್ಣ ಅವಲೋಕನೆ ಮಾಡಿದರು. ಗಜ಼ಲ ರಚನೆಯಲ್ಲಿ ತೊಡಗಿಕೊಳ್ಳುವವರಿಗೆ ಇದೊಂದು ಅಧ್ಯಯನ ಯೋಗ್ಯ ಕೃತಿಯಾಗಿದೆ ಎಂದರು.

300x250 AD

“ಮಹಿ ಗಜ಼ಲ್” ಕೃತಿಕಾರ ಮಹೇಶ ಹೆಗಡೆ, ಹಳ್ಳಿಗದ್ದೆ, ನನ್ನ ಕೃತಿಯ ಕುರಿತಾಗಿ ನಾನೇನನ್ನು ಹೇಳಬಯಸುವುದಿಲ್ಲ. ಓದುಗರೆ ನಿರ್ಣಾಯಕರು. ಗಜಲ್ ಗಳು ಸರಸ್ವತಿಯ ಮುಡಿಯನ್ನು ಅಲಂಕರಿಸಬೇಕಾಗಿದೆ. ರಚನೆಗಳಲ್ಲಿ ಸಂವೇದನಾಶೀಲತೆ ಎದ್ದು ಕಾಣುವಂತಿರಬೇಕು ಎಂದರು.

ಅಧ್ಯಕ್ಷೀಯ ಭಾಷಣದಲ್ಲಿ ಕಥೆಗಾರ ಕೆ ಮಹೇಶ,ಸಾಹಿತ್ಯದ ನೆಲೆಗಟ್ಟಿನಲ್ಲಿ ಜರುಗುತ್ತಿರುವ ಈ ಕಾರ್ಯಕ್ರಮಗಳು ಅದ್ಭುತವಾಗಿವೆ. ಸಾಹಿತ್ಯದ ಶಕ್ತಿ ಎಂದರೆ ಸಂಸ್ಕಾರ ಮತ್ತು ಸಂಸ್ಕೃತಿ. ಸಾಹಿತ್ಯದ ಪಾವಿತ್ರ್ಯತೆಯೇ ಅದರ ಆಸ್ತಿ ಎಂದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ರಂಜನಾ ಹೆಗಡೆ, ಶೋಭಾ ಭಟ್, ಕೆ.ಎಸ್. ಅಗ್ನಿಹೋತ್ರಿ, ಡಿ.ಎಂ. ಭಟ್ ಕುಳುವೆ, ಪಿ. ಸಿ.ದಾಕ್ಷಾಯಿಣಿ, ಗೋಪಾಲಕೃಷ್ಣ ಸಸಿತೋಟ, ಪ್ರಣತಿ ಹೆಗಡೆ, ಉಮೇಶ ದೈವಜ್ಞ, ಸರೋಜಾ ಪೋತದಾರ, ಅಜಿತ ಬೀಳಗಿ, ವೀಣಾ ನಾಯ್ಕ ತಮ್ಮ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.

ಪ್ರಾರಂಭದಲ್ಲಿ ಕವಯಿತ್ರಿ ರಾಜಲಕ್ಷ್ಮಿ ಭಟ್ ಪ್ರಾರ್ಥನೆ ಸಲ್ಲಿಸಿದರು. ಕವಯಿತ್ರಿ ಶೋಭಾ ಭಟ್ ಎಲ್ಲರನ್ನೂ ಸ್ವಾಗತಿಸಿ,ಪರಿಚಯಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಜಿ ಸುಬ್ರಾಯ ಭಟ್ಟ, ಬಕ್ಕಳ, ಕಥೆಗಾರ ಕೆ ಮಹೇಶ‌ ಮತ್ತು ಗಜ಼ಲ್‌ಕಾರ ಮಹೇಶ ಹೆಗಡೆ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಮನೋಹರ ಮಲ್ಮನೆ ಸಹಕರಿಸಿದರು. ಸಾಹಿತಿ ಭವ್ಯ ಹಳೆಯೂರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top