ಶಿರಸಿ:: ಅತ್ಯಂತ ವೈವಿಧ್ಯಮಯವೂ ವಿನೂತನವೂ ಆಗಿ ಜ.11 ರಂದು ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ಚಂದನ ವಾರ್ಷಿಕ ಹಬ್ಬ ಸಂಪನ್ನಗೊಂಡಿತು.
ವಿದ್ಯಾರ್ಥಿನಿಯರ ಪುಷ್ಪಾಂಜಲಿ ನೃತ್ಯ ಮತ್ತು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಚಂದನ ವಾರ್ಷಿಕ ಹಬ್ಬದಲ್ಲಿ ಆಗಮಿಸಿದ ಸರ್ವರನ್ನು ಮಿಯಾರ್ಡ್ಸ ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿಗಳಾದ ಎಲ್,ಎಮ್. ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ಪ್ರಾಚಾರ‍್ಯರಾದ ಡಾ.ಆರ್.ಎಮ್. ಭಟ್ ಅತಿಥಿಗಳನ್ನು ಪರಿಚಯಿಸಿದರು. ಉದ್ಘಾಟಕರಾಗಿ ಆಗಮಿಸಿದ್ದ ವೇಂಕಟೇಶ್ ಹೆಗಡೆ ಹೊಸಬಾಳೆ ರವರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಚಂದನ ಕಾಲೇಜಿನ ಕಾರ್ಯ ಅಭಿನಂದನಾರ್ಹವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ, ಮಾಡುತ್ತಿರುವ ಮಕ್ಕಳನ್ನು ನೋಡಿ ಸಂತಸವಾಯಿತು ಈ ಕಾಲೇಜು ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು. ಬಹುಮಾನ ವಿತರಕರಾಗಿ ಆಗಮಿಸಿದ ಶ್ರೀಮತಿ ಭುವನೇಶ್ವರಿ ಬಿ. ಪಾಟೀಲ್ ಮಾತನಾಡಿ ವಿದ್ಯಾಭ್ಯಾಸವು ಕೇವಲ ವೃತ್ತಿ ಪಡೆಯುವುದಕ್ಕಾಗಿ ಅಲ್ಲ , ಜ್ಞಾನಾರ್ಜನೆ ಸಲುವಾಗಿ ಎಂದು ಹೇಳಿದರು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಟ್ಟಾಗ ನಿರ್ದಿಷ್ಟ ಗುರಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಲಚಂದ್ರ ಹೆಗಡೆ ಶೈಕ್ಷಣಿಕ ಸಾಧನೆಯ ಬಗ್ಗೆ ಪ್ರಸಂಶೆ ವ್ಯಕ್ತ ಪಡಿಸಿ ವಿದ್ಯಾರ್ಥಿಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ 2023-24 ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಪ್ರಸಿದ್ದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ 100 ಕ್ಕೆ 100 ಫಲಿತಾಂಶ ದಾಖಲಿಸಿದ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಚಾರ‍್ಯರಾದ ಡಾ. ಆರ್.ಎಮ್.ಭಟ್ ಅವರ ಮಾರ್ಗದರ್ಶನದಲ್ಲಿ ಸ್ನೇಹಾ ಹೆಗಡೆ ಬರೆದ ನೀಟ್ ಜೀವಶಾಸ್ತ್ರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕ್ರೀಡೆ ,ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಾರ್ಷಿಕ ವರದಿವಾಚನವನ್ನು ಸ್ನೇಹಾ ಹೆಗಡೆ ನೇರವೇರಿಸಿ ಕೊಟ್ಟರು. ಬಹುಮಾನ ವಿತರಣೆಯನ್ನು ಉಪನ್ಯಾಸಕರಾದ ಗುರುವಿಘ್ನೇಶ್ ಭಟ್ ಹಾಗೂ ಮಧುರಾ ಹೆಗಡೆ ನಡೆಸಿಕೊಟ್ಟರು. ಚಂದನ ಕಾಲೇಜಿನ ಅಧ್ಯಕ್ಷರಾದ ವಿ.ಜಿ. ಜೋಶಿ, ಮಿಯಾರ್ಡ್ಸ್ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ಹೆಗಡೆ , ಕಾರ‍್ಯಕ್ರಮದಲ್ಲಿ ಚಂದನ ಕಾಲೇಜಿನ ಸಿಇಓ ಆದ ಸಿ.ಡಿ ನಾಯ್ಕ ಸದಸ್ಯರಾದ ವಿನಯ ಜೋಶಿ ಹಾಗೂ ಮೀಯಾರ್ಡ್ಸ್ ಟ್ರಸ್ಟಿಗಳಾದ ಸತೀಶ ಹೆಗಡೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಾಲಾ ಹಿತೈಷಿಗಳು, ಪಾಲಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಉಪನ್ಯಾಸಕರಾದ ಮಂಜುನಾಥ ಭಟ್ ನಿರೂಪಿಸಿದರು. ಉಪನ್ಯಾಸಕರಾದ ಶ್ರೀಮತಿ ತಬಸ್ಸುಮ ತಿಳುವಳ್ಳಿ ವಂದನಾರ್ಪಣೆ ನಡೆಸಿಕೊಟ್ಟರು
ಮಧ್ಯಾಹ್ನ ಕಾಲೇಜಿನ ವಿದ್ಯಾರ್ಥಿಗಳು ಭರತನಾಟ್ಯ, ತಬಲಾ ವಾದನ, ನೃತ್ಯ, ಯಕ್ಷಗಾನ ಹೀಗೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸೇರಿದ ಸಾವಿರಾರು ಮಂದಿಯನ್ನು ರಂಜಿಸಿದರು.