ಶಿರಸಿ: ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ ಶಿರಸಿ ಇದರ ತ್ರೈವಾರ್ಷಿಕ ಸಂಗೀತ ಸಮಾರೋಹ ನಗರದ ರಂಗಧಾಮದಲ್ಲಿ ಜ.18 ಹಾಗೂ 19 ರಂದು ಮಧ್ಯಾಹ್ನ 3 ರಿಂದ 9.30 ರವರೆಗೆ ನಡೆಯಲಿದೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ರಾಜ್ಯಮಟ್ಟದ ಖ್ಯಾಲ್ ಗಾಯನ ಸ್ಫರ್ಧೆ ಹಾಗೂ ಧ್ವನಿ ಸಂಸ್ಕಾರದ ಶಿಬಿರಗಳನ್ನು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಕ್ಕಾಗಿ ಆರೋಹಿ ಸಂಘಟಿಸಿದ್ದು ನಿರಂತರ ಗಾಯನ ತರಗತಿಗಳನ್ನು ದೀಪಾ ಶಶಾಂಕ ಇವರ ನೇತೃತ್ವದಲ್ಲಿ ನಡೆಸುತ್ತಿದೆ.
ಜ.18ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆಯುವ ಗಾಯನದಲ್ಲಿ ತಬಲಾದಲ್ಲಿ ಶಿವರಾಮ ಹೆಗಡೆ, ಸಂವಾದಿನಿಯಲ್ಲಿ ದೀಪಾ ಶಶಾಂಕ ಹೆಗಡೆ, ಕವಿತಾ ಹರೀಶ ಹೆಗಡೆ ಸಾಥ್ ನೀಡಲಿದ್ದಾರೆ. ನಂತರ ಹಿಂದುಸ್ತಾನಿ ಗಾಯನ ಜುಗಲ್ ಬಂದಿಯಲ್ಲಿ ಶುಭಾಂಗಿ ಜಾಧವ ಹುಬ್ಬಳ್ಳಿ, ಮೇಧಾ ಭಟ್ಟ ಅಗ್ಗೆರೆ ಗಾಯನ ಪ್ರಸ್ತುತಪಡಿಸಲಿದ್ದಾರೆ. ತಬಲಾದಲ್ಲಿ ಡಾ| ಶ್ರೀಹರಿ ದಿಗ್ಗಾವಿ, ಹಾರ್ಮೋನಿಯಂನಲ್ಲಿ ಅಜಯ ವರ್ಗಾಸರ ಸಹಕಾರ ನೀಡಲಿದ್ದಾರೆ.
ಜ.19 ರಂದು ವಿದ್ಯಾರ್ಥಿಗಳಿಂದ ಗಾಯನ ನಡೆಯಲಿದ್ದು, ಡಾ| ಮನು ಪಿ. ಹೆಗಡೆ ಹಾಲಳ್ಳ ಇವರಿಗೆ ಆರೋಹಿ ಸಾಧಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸ್ವರಾತ್ಮ ಗುರುಕುಲದ ಡಾ| ಹರೀಶ ಹೆಗಡೆ ನಿರ್ದೇಶಿಸಿದ ರಾಗಾಂತರಂಗ ಗಾನಯಾನ ನಡೆಯಲಿದ್ದು, ಶ್ರೀಹರಿ ಕುಲಕರ್ಣಿ, ವಿಶಾಲಕಟ್ಟಿ, ದೀಪ್ತಿ ಭಟ್ಟ, ದೀಪಾ ಹೆಗಡೆ, ಕವಿತಾ ಹೆಗಡೆ ಗಾಯನ ಪ್ರಸ್ತುತಪಡಿಸಲಿದ್ದಾರೆ. ತಬಲಾದಲ್ಲಿ ಗಣೇಶ ಗುಂಡಕಲ್, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ರಿದಂ ಪ್ಯಾಡ್ನಲ್ಲಿ ವಿ.ಟಿ.ಭಟ್ಟ ಸಾಥ್ ನೀಡಲಿದ್ದಾರೆ.
ನೆಮ್ಮದಿ ಬಳಗ, ಆರೋಹಿ ವಿದ್ಯಾಲಯದ ಪಾಲಕ ಬಳಗ, ಶ್ರೀ ಪ್ರಭಾ ಸ್ಟುಡಿಯೋ, ಉದಯ ಸೌಂಡ್ಸ್ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆೆ.ಸಂಗೀತಾಸಕ್ತರು ಆಗಮಿಸಿ ಎಲ್ಲ ಉದಯೋನ್ಮುಖ ಸಂಗೀತಾಭ್ಯಾಸಿಗಳನ್ನು ಹರಸಬೇಬೆಂದು ಆರೋಹಿ ಮುಖ್ಯಸ್ಥರಾದ ಶಶಾಂಕ ಹೆಗಡೆ, ಸಂಗೀತ ವಿದ್ಯಾಲಯದ ಗುರುಮಾತೆಯರಾದ ದೀಪಾ ಶಶಾಂಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.