ಶಿರಸಿ: ಸಿದ್ಧಿವಿನಾಯಕ ದೇವಸ್ಥಾನ ಗೋಳಿಯಲ್ಲಿ ಜ.17, ಶುಕ್ರವಾರ ಸಂಕಷ್ಟಿ ನಿಮಿತ್ತ ಅಪರಾಹ್ನ 4 ಗಂಟೆಯಿಂದ 6 ಗಂಟೆಯವರೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಗೋಳಿ ಇವರಿಂದ ಭಜನಾ ಸೇವೆ ನಡೆಯಲಿದೆ. ನಂತರ ರಾಜೇಶ್ವರಿ ಸತೀಶ ಹೆಗಡೆ ಕಾರೇಕೊಪ್ಪ ಹಾಗೂ ಭವ್ಯ ಕೆ. ಭಟ್ಟ ಶಿರಸಿ ಇವರಿಂದ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಭಜನಾ ಸೇವೆ ನಡೆಯಲಿದೆ. ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ದೇವಳದ ಆಡಳಿತ ಸಮಿತಿ ಅದ್ಯಕ್ಷ ಎಮ್.ಎಲ್.ಹೆಗಡೆ ಕೋರಿದ್ದಾರೆ.