ಹೊನ್ನಾವರ: ಚಂದಾವರ ಸೀಮೆಯ ಶಕ್ತಿವಂತ ದೇವರಂದೇ ಖ್ಯಾತನಾದ ಹನುಮಂತನ ಪಲ್ಲಕ್ಕಿಯು ಬಾಳೆಗದ್ದೆಯಿಂದ ನಗರೆ ಗ್ರಾಮಕ್ಕೆ ಶುಕ್ರವಾರ ಆಗಮಿಸಲಿದೆ.
ಕಳೆದ ಹನ್ನೆರಡು ವರ್ಷದ ನಂತರ ತಮ್ಮುರಿಗೆ ಆಗಮಿಸುವ ಹನುಮನ ಸ್ವಾಗತಕ್ಕೆ ನಗರೆ ಗ್ರಾಮ ಸಕಲ ರೀತಿಯಿಂದಲು ಶೃಂಗಾರಗೊಂಡಿದೆ. ತಿಂಗಳ ಹಿಂದೆ ಸಮಿತಿ ರಚಿಸಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಾಲಾ ಅಂಗಳಕ್ಕೆ ಕೆಲವು ನೈಸರ್ಗಿಕ ಸಾಮಗ್ರಿಯನ್ನೇ ಬಳಸಿ ಐವತ್ತಕ್ಕಿಂತ ಹೆಚ್ಚು ಜನರು ಶ್ರಮದಾನ ಮಾಡಿ ದೊಡ್ಡದಾದ ಚಪ್ಪರ ಹಾಕಿದ್ದಾರೆ. ಒಂದುವಾರದಿಂದ ಊರಿನವರೆಲ್ಲ ಸೇರಿ ಜಾತಿ ಬೇಧದ ಪರಿಬೇಧ ಇಲ್ಲದೆ ಸಿದ್ಧತೆಯ ಕೆಲಸ ಮಾಡುತ್ತಿದ್ದಾರೆ. ಊರಿನ ಮಹಿಳೆಯರು ಒಟ್ಟು ಗೂಡಿ ಶ್ರಮದಾನ ಮಾಡುತ್ತಿದ್ದಾರೆ.
ಶಾಲಾ ಅಂಗಳಕ್ಕೆ ದೊಡ್ಡದಾದ ಚಪ್ಪರ ಹಾಕುವುದರ ಜೊತೆಗೆ , ಪಲ್ಲಕ್ಕಿ ಆಗಮಿಸುವ ದಾರಿ ಉದ್ದಕ್ಕೂ ಪತಾಕೆ, ಮಾವಿನ ತೋರಣ, ವಿದ್ಯುತ್ ದೀಪದ ಅಲಂಕಾರ ಮಾಡಿದ್ದಾರೆ. ಹತ್ತು ದಿನಗಳ ಕಾಲ ತಂಗುವ ಹನುಮನಿಗೆ ನಿತ್ಯವು ದಂಡಾವಳಿ ಪೂಜೆ, ಅನ್ನದಾನ, ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಒಟ್ಟಾರೆ ಚಂದಾವರ ಹನುಮನ ಆಗಮನಕ್ಕೆ ಊರಿಗೆ ಊರೆ ಸಂಭ್ರಮಿಸುತ್ತಿದೆ.
ಏ. 25 ರಂದು ಶುಕ್ರವಾರ ಸಾಯಂಕಾಲ 6-30ಕ್ಕೆ ಶ್ರೀ ದೇವರ ಪಲ್ಲಕ್ಕಿಯನ್ನು ಪೂರ್ಣಕುಂಭ ಪಂಚವಾದ್ಯದೊಂದಿಗೆ ಸ್ವಾಗತಿಸಿ, ಪೀಠಾರೋಹಣ ಮಾಡಲಾಗುತ್ತದೆ. ಏ. 26 ರಂದು ಶನಿವಾರ ಬೆಳಿಗ್ಗೆ 10ಗಂಟೆಗೆ ಗಣಹವನ, ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ. ಭಕ್ತಿ ಸಂಗೀತ, ಏ. 27 ರಂದು ರವಿವಾರ ಬೆಳಗ್ಗೆ ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ.
ಏ. 28 ರಂದು ಸೋಮವಾರ ಬೆಳಗ್ಗೆ ಮಹಾಪೂಜೆ ಸಂಜೆ ದಂಡಾವಳಿ, ಮಹಾಪೂಜೆ, ಅನ್ನ ಸಂತರ್ಪಣೆ, ಭಕ್ತಿ ಸಂಗೀತ ಕಾರ್ಯಕ್ರಮ, ಏ. 29 ರಂದು ಮಂಗಳವಾರ ಬೆಳಿಗ್ಗೆ ಮಹಾಪೂಜೆ, ಸಂಜೆ ದಂಡಾವಳಿ ಹಾಗೂ ಮಹಾಪೂಣೆ, ಅನ್ನ ಸಂತರ್ಪಣೆ, ಭಜನೆ ಕಾರ್ಯಕ್ರಮ, ಏ. 30 ರಂದು ಬುಧವಾರ ಬೆಳಿಗ್ಗೆ ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ, ಅನ್ನ ಸಂತರ್ಪಣೆ, ಭಕ್ತಿ ಸಂಗೀತ ಕಾರ್ಯಕ್ರಮ, ಮಾ. 1 ಗುರುವಾರ ಬೆಳಿಗ್ಗೆ ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ, ಹರಿ ಕೀರ್ತನೆ, ಮಾ. 2 ಶುಕ್ರವಾರ ಬೆಳಿಗ್ಗೆ ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ, ಭಜನೆ, ಅನ್ನ ಸಂತರ್ಪಣೆ, ಯಕ್ಷಗಾನ, ಮಾ. 3 ರಂದು ಶನಿವಾರ ಬೆಳಗ್ಗೆ ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ, ಭಜನೆ, ಅನ್ನ ಸಂತರ್ಪಣೆ, ಮಾ. 4 ರವಿವಾರ ಬೆಳಗ್ಗೆ ಮಹಾಪೂಜೆ, ಸಂಜೆ ದಂಡಾವಳಿ ಹಾಗೂ ಮಹಾಪೂಜೆ, ಭಜನೆ, ಮಾ. 5 ಸೋಮವಾರ ಬೆಳಗ್ಗೆ ಮಹಾಪೂಜೆ, ಸಂಜೆ ದಂಡಾವಳಿ, ಮಹಾಪೂಜೆ, ಭಜನೆ, ಅನ್ನ ಸಂತರ್ಪಣೆ, ಮಾ. 6 ರಂದು ಮಂಗಳವಾರ ಬೆಳಿಗ್ಗೆ ಮಹಾಪೂಜೆ ಸಂಜೆ ದಂಡಾವಳಿ, ಮಹಾಪೂಜೆ, ಅನ್ನ ಸಂತರ್ಪಣೆ, ಯಕ್ಷಗಾನ, ಮಾ. 7 ಬುಧವಾರ ಬೆಳಗ್ಗೆ ಮಹಾಪೂಜೆ, ಮಧ್ಯಾಹ್ನ ನಾಲ್ಕು ಗಂಟೆಯಿಂದ ಲೈಟಿಂಗ್, ಡಿ.ಜೆ. ಚಂಡೆವಾದ್ಯ ಭವ್ಯ ಮೆರವಣಿಗೆಯೊಂದಿಗೆ ಪಲ್ಲಕ್ಕಿಯನ್ನು ಹಳಗೇರಿ ಗ್ರಾಮಕ್ಕೆ ಕಳುಹಿಸಿಕೊಡಲಾಗುವುದು. ಈ ಎಲ್ಲಾ ಕಾರ್ಯಕ್ರಮ ಚಂದಾವರ ಹನುಮಂತನ ಸದ್ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಎಂದು ಉತ್ಸವ ಸಮಿತಿಯವರು ತಿಳಿಸಿದ್ದಾರೆ.
ಯಕ್ಷಗಾನ ಕಾರ್ಯಕ್ರಮ :
02-05-2025 ಶುಕ್ರವಾರ ರಾತ್ರಿ 9-00 ಗಂಟೆಗೆ
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಅತಿಥಿ ಕಲಾವಿದರಿಂದ
ಲಂಕಾದಹನ ಮತ್ತು ಚಂದ್ರಾವಳಿ
06-05-2025 ಮಂಗಳವಾರ ರಾತ್ರಿ 9-00 ಗಂಟೆಗೆ
ಕಲಾಶ್ರೀ ಯಕ್ಷಮಿತ್ರ ಮಂಡಳಿ, ಹುಡಗೋಡ ಅತಿಥಿ ಕಲಾವಿದರಿಂದ ಲವ-ಕುಶ