
ವಿಶೇಷ ವರದಿ; ಕೇಂದ್ರ ಲೋಕಸೇವಾ ಆಯೋಗ (UPSC) 2024 ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿದ್ದು, 1000 ಕ್ಕೂ ಹೆಚ್ಚು ಅಭ್ಯರ್ಥಿಗಳು ದೇಶದ ಅತ್ಯುನ್ನತ ಸಿವಿಲ್ ಸರ್ವೀಸಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಹಲವರು IAS, IPS, IFS ಸೇರಿದಂತೆ ವಿವಿಧ ಕೇಂದ್ರ ಸೇವೆಗಳ ಭಾಗವಾಗಲಿದ್ದಾರೆ.
ನಿವೃತ್ತ ಹಿರಿಯ ಅಧಿಕಾರಿಗಳಾದ ಡಾ. ಸಿ.ಎಸ್. ಕೆದಾರ್ ಐಎಎಸ್ ಮತ್ತು ಡಾ. ಜಿ.ಎನ್. ಶ್ರೀಕಂಠಯ್ಯ ಐಎಫ್ಎಸ್ ಅವರ ನೇತೃತ್ವದ India 4 IAS ಸಂಸ್ಥೆಯು 20ಕ್ಕೂ ಹೆಚ್ಚು ರ್ಯಾಂಕ್ಗಳನ್ನು ಪಡೆದಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ 60% ವಿದ್ಯಾರ್ಥಿಗಳು India 4 IAS ಸಂಸ್ಥೆಯವರಾಗಿದ್ದಾರೆ.
ಹಾವೇರಿ ಜಿಲ್ಲೆಯ ಡಾ. ಸಚಿನ್ ಬಿ. ಗುತ್ತೂರ್ ಅವರು ಅಖಿಲ ಭಾರತ 41ನೇ ರಾಂಕ್ ಗಳಿಸಿ India 4 IAS ನ ಮೊದಲಿಗರಾಗಿದ್ದಾರೆ. ಕರ್ನಾಟಕದ ಡಾ. ರಂಗ ಮಂಜು (AIR 24) ಅವರು ಕೂಡಾ ಕರ್ನಾಟಕಕ್ಕೆ ಮೊದಲಿಗರಾಗಿ ಸಾಧನೆಯ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ India 4 IAS ಸಂಸ್ಥೆ UPSC ಗೆ ತಯಾರಿ ಮಾಡುವ ಯುವಕರಿಗೆ ವಿಶ್ವಾಸದ ಕೇಂದ್ರವಾಗಿ ರೂಪಗೊಂಡಿದೆ. ದೆಹಲಿ, ಹೈದ್ರಾಬಾದ್ ನಂತಹ ಶಿಕ್ಷಣ ಕೇಂದ್ರಗಳಿಂದ ಬಂದ ನಿಪುಣ ಅಧ್ಯಾಪಕರಿಂದ ಬೋಧನೆ, ಆಧುನಿಕ ಹಾಗೂ ಸೂಕ್ತವಾದ ಶೈಕ್ಷಣಿಕ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಸಂಸ್ಥೆ ಇದಾಗಿದ್ದು, ಕರ್ನಾಟಕವು ಕೇಂದ್ರ ನಾಗರೀಕ ಸೇವೆಗಳಿಗೆ ಹೆಚ್ಚು ಹೆಚ್ಚು ಅಧಿಕಾರಿಗಳನ್ನು ನೀಡುತ್ತಿರುವ ರಾಜ್ಯಗಳಲ್ಲಿ ಒಂದಾಗಿ ಬೆಳೆದಿದೆ. ಈ ವರ್ಷವೂ ದಿಟ್ಟತೆ, ಶಿಸ್ತು ಮತ್ತು ಸ್ಪಷ್ಟ ಗುರಿಯೊಂದಿಗೆ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಸಾಧನೆಮಾಡಿದ್ದು, India 4 IAS ಮಾದರಿಯ ತರಬೇತಿ ಸಂಸ್ಥೆಗಳ ಪಾತ್ರವನ್ನು ಮತ್ತಷ್ಟು ದೃಢಪಡಿಸುತ್ತದೆ.
ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ವತಿಯಿಂದ ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ 2024–25ರಲ್ಲಿ ಯಶಸ್ಸು ಪಡೆದ ಕರ್ನಾಟಕದ ಅಭ್ಯರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು,ಈ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಲವು ಹಿರಿಯ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.