ಹೊನ್ನಾವರ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಇ.ಪಿಎಲ್. ಸಂಘಟನಾ ಸಮಿತಿ ಹೊನ್ನಾವರ ಆಯೋಜಿಸಿದ ಕ್ರಿಕೇಟ್ ಪಂದ್ಯಾವಳಿಯಲ್ಲಿ ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್ ಆಗಿ ಬ್ರಿಲಿಯಂಟ್ ಕ್ರೀಕೆಟರ್ ತಂಡ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ತಾಲೂಕಿನ ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸರ್ಕಾರಿ ನೌಕರರ ಪರಿವಾರದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ತೆರೆಕಂಡಿದೆ. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಕರಾವಳಿ ಕಾವಲುಪಡೆಯ ಪಿಎಸೈ ಸಂಪತಕುಮಾರ ಮಾತನಾಡಿ 17ಕ್ಕೂ ಅಧಿಕ ಇಲಾಖೆಯವರು ಒಗ್ಗೂಡಿ ಕ್ರೀಡಾಕೂಟ ಯಶ್ವಸಿಗೆ ಶ್ರಮಿಸಿದ್ದಾರೆ. ರಾಜ್ಯದ ಇತರೆ ತಾಲೂಕಿನ ಸರ್ಕಾರಿ ನೌಕರರ ಸಂಘಟನೆಗೆ ಮಾದರಿಯಾಗಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸಾಕುಳಿ ಗ್ರಾ.ಪಂ.ಸದಸ್ಯ ಎಚ್.ಆರ್.ಗಣೇಶ ಮಾತನಾಡಿ ನೌಕರರು ಆಟ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಹೊಸಾಕುಳಿ ಊರಿನಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಕ್ರೀಡೆ ದೈಹಿಕವಾಗಿ ಆರೋಗ್ಯ ನೀಡುವ ಜೊತೆ ಮಾನಸಿಕವಾಗಿ ಸಮಧಾನ ನೀಡುತ್ತದೆ. ಈ ಮೈದಾನ ಇನ್ನಷ್ಟು ಅಭಿವೃದ್ದಿಯಾಗಬೇಕಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರಾದ ಸುಧೀಶ ನಾಯ್ಕ ಮಾತನಾಡಿ ನಾವೆಲ್ಲರು ಸೇರಿ ಕಳೆದ ಮೂರು ವರ್ಷದ ಹಿಂದೆ ಒಗ್ಗಟ್ಟಾಗಿ ಸಮಾಜಕ್ಕೆ ಒಂದು ಸಂದೇಶ ನೀಡುವ ಆಶಯದೊಂದಿಗೆ ಸಂಘಟನೆ ಮಾಡಿಕೊಂಡೆವು. ಸಮಾಜದಲ್ಲಿ ನಾವು ನೌಕರರಾಗಿ ಮಾತ್ರ ಇರದೇ, ಸಾಮಾಜಿಕ ಕಳಳಿಯ ಜೊತೆಗೆ ಕ್ರೀಡಾಭಿಮಾನದ ಜೊತೆಗೆ ಕುಟುಂಬದೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದೇವೆ ಎನ್ನುವ ದಿಶೆಯಲ್ಲಿ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸುತ್ತಾ ಬಂದಿದ್ದೇವೆ ಎಂದು ಸಂಘಟನೆಯ ಕಾರ್ಯದ ಕುರಿತು ಮಾಹಿತಿ ನೀಡಿದರು.
ಕ್ರಿಕೇಟನಲ್ಲಿ ವಿ.ಎ.ಪಟಗಾರ ಮತ್ತು ಉದಯ ಬಾಂದೇಕರ್ ಮಾಲಿಕತ್ವದ ರೈಸಿಂಗ್ ಸ್ಟಾರ ತಂಡ ಪ್ರಶಸ್ತ್ರಿ ಮುಡಿಗೇರಿಸಿಕೊಂಡರೆ, ವೆಂಕ್ರಟಮಣ ಹಳದೀಪುರ ಮಾಲಿಕತ್ವದ ಬ್ರಿಲಿಯಂಟ್ ಕ್ರಿಕೇಟರ್ ರನ್ನರ ಅಪ್ ಪ್ರಶಸ್ತಿ ಪಡೆಯಿತು. ಪ್ರತಿ ಪಂದ್ಯದಲ್ಲಿ ಮ್ಯಾನ್ ಆಪ್ ದಿ ಮ್ಯಾಚ್ ಹಾಗೂ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಧ ಆಟಗಾರರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸರಣಿ ಶೇಷ್ಠ ಪ್ರಶಸ್ತ್ರಿಯನ್ನು ಪೊಲೀಸ್ ಇಲಾಖೆಯ ಲಕ್ಷ್ಮೀಶ ಇವರು ಟ್ರೋಪಿಯೊಂದಿಗೆ ಬಹುಮಾನ ರೂಪದಲ್ಲಿ ಸೈಕಲ್ ಸ್ವೀಕರಿಸಿದರು.
ಮಹಿಳಾ ನೌಕರರಿಗೆ ಆಯೋಜಿಸಿದ ಥ್ರೋಬಾಲ್ ಪಂದ್ಯಾವಳಿಯ ಪ್ರಥಮ ಸ್ಥಾನವನ್ನು ಆರ್.ಡಿ.ಪಿ.ಆರ್ ತಂಡ ಪಡೆದರೆ ರನ್ನರ್ ಅಪ್ ತಂಡವಾಗಿ ಶಿಕ್ಷಣ ಇಲಾಖೆ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ನಿಕಟಪೂರ್ವ ಅಧ್ಯಕ್ಷ ರಾಜಕುಮಾರ ನಾಯ್ಕ, ಶಿಕ್ಷಕ ಪ್ರಕಾಶ ನಾಯ್ಕ, ಕ್ರಿಕೇಟ್ ತಂಡದ ನಾಯಕರಾದ ಬಾಲಚಂದ್ರ ನಾಯ್ಕ, ವಿ.ಜಿ.ಹೆಗಡೆ, ರಾಧಾಕೃಷ್ಣ ನಾಯ್ಕ, ಡಾ.ಪ್ರವೀಣ ಹೆಗಡೆ, ಕಿಶೋರ ನಾಯ್ಕ, ಉದಯ ಬಾಂದೇಕರ್, ವೆಂಕ್ರಟಮಣ ಹಳದೀಪುರ, ವೆಂಕ್ರಟಮಣ ಪಟಗಾರ, ರಾಜು ನಾಯ್ಕ ಸೇರಿದಂತೆ ಆಟಗಾರರು ಅನಿಸಿಕೆ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘಟನೆಯ ಪ್ರಮುಖರಾದ ಕಿರಣ ಮೇಸ್ತ ನಾಗಪ್ಪ ಕೊಟ್ಟುರು, ಸೂರ್ಯಕಾಂತ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘಟನೆಯ ಕಾರ್ಯದರ್ಶಿ ಶಿಕ್ಷಕ ಸತೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು