Slide
Slide
Slide
previous arrow
next arrow

ವಿವಿಧ ದಲಿತಪರ ಸಂಘಟನೆಗಳಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

300x250 AD

ದಾಂಡೇಲಿ : ಜನವರಿ 1ರಂದು ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿದ್ದು, ಈ‌ ನಿಟ್ಟಿನಲ್ಲಿ ದ ನಗರದಲ್ಲಿಯೂ ಬುಧವಾರ ವಿವಿಧ ದಲಿತ ಪರ ಸಂಘಟನೆಗಳು ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಿತು.

ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ವತಿಯಿಂದ ಬುಧವಾರ ಬೆಳಿಗ್ಗೆ ನಗರ ಸಭೆಯ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಿ ಗೌರವವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ರಾಜ್ಯಾಧ್ಯಕ್ಷರಾದ ದೇವೆಂದ್ರ ಮಾದರ, ಸಂಘಟನೆಯ ಪದಾಧಿಕಾರಿಗಳಾದ ರವಿ ದಂಡಗಿ, ರಾಜೇಸಾಬ ಹಾವರಗಿ, ಮಂಜುನಾಥ ಮೇತ್ರಿ, ರಾಮಚಂದ್ರ ಕಾಂಬಳೆ, ಓಬತ್ತಿ ಗೋನಾ, ಪರಶುರಾಮ್ ಮಾದಿಗ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಬುಧವಾರ ಸಂಜೆ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಸೇನೆ ಹಾಗೂ ಆದಿ ಜಾಂಬವಂತ ಸಂಘಟನೆ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯ್ತು. ನಗರ ಸಭೆಯ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.

300x250 AD

ಈ ಸಂದರ್ಭದಲ್ಲಿ ಸಂಘಟನೆಯ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ನಡಿಗೇರ, ಸಂಘಟನೆಯ ಪ್ರಮುಖರುಗಳಾದ ಆಯಿಷಾ ಮುಕಾಶಿ , ಸದಾಶಿವ್ ಕಾಂಬ್ಳೆ, ಬಸವರಾಜ ಹರಿಜನ, ಸುರೇಶ್ ಕೇದಾರಿ, ದತ್ತು ಮಾಳಿಗೆ , ಹನುಮಂತ ಹರಿಜನ್, ಎಚ್ ಗೋಪಾಲ್, ರಾಮು, ಹುಸೇನ್ಮೀಯಾ, ಸೋನು, ಶಕೀಲಾ ಬಾನು, ದಲಿತ ಸಂಘರ್ಷ ಸಮಿತಿಯ ರಾಜೇಶ್ ಕಾಂಬಳೆ, ಶ್ರೀನಿವಾಸ್ ಹರಿಜನ್ ಹಾಗೂ ಸಂಘಟನೆ ಪ್ರಮುಖರು ಮತ್ತು ಸದಸ್ಯರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top