ದಾಂಡೇಲಿ : ಸವಾರನ ನಿಯಂತ್ರಣ ತಪ್ಪಿ ಬೈಕೊಂದು ಸ್ಕಿಡ್ ಆಗಿ ಬಿದ್ದು ಸವಾರನಿಗೆ ಗಾಯವಾದ ಘಟನೆ ಬುಧವಾರ ರಾತ್ರಿ ನಗರದ ಸೋಮಾನಿ ವೃತ್ತದ ಹತ್ತಿರ ನಡೆದಿದೆ.
ಸ್ಥಳೀಯ ಗಣೇಶನಗರದ ನಿವಾಸಿ ಅಗ್ನೇಲ್ ವರ್ತ್ ಎಂಬವರೇ ಗಾಯಗೊಂಡವರಾಗಿದ್ದು, ಇವರು ನಗರದ ಸಂಡೆ ಮಾರ್ಕೆಟ್ ಕಡೆಯಿಂದ ಗಣೇಶನಗರಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಸೋಮಾನಿ ವೃತ್ತದ ಹತ್ತಿರ ದ್ವಿಚಕ್ರ ವಾಹನ ಸ್ಕಿಡ್ ಆಗಿದೆ. ಈ ಸಂದರ್ಭದಲ್ಲಿ ಅಗ್ನೇಲ್ ವರ್ತ್ ಅವರಿಗೆ ಮುಖಕ್ಕೆ ತಲೆಗೆ ಹಾಗೂ ಕೈಗೆ ಮತ್ತು ಕಾಲಿಗೆ ಗಾಯವಾಗಿದೆ.
ತಕ್ಷಣವೇ ಸ್ಥಳೀಯರಾದ ಮೃತ್ಯುಂಜಯ ತೆಂಗಿನಮಠ ಹಾಗೂ ಇನ್ನಿತರರು ಸೇರಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.