Slide
Slide
Slide
previous arrow
next arrow

ಸಂಗೀತಾಸಕ್ತರ ಮನರಂಜಿಸಿದ ‘ಗಾನಗೋಷ್ಠಿ’

300x250 AD

ಸಿದ್ದಾಪುರ: ತಾಲೂಕಿನಲ್ಲಿ ನಿರಂತರ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತ, ಸಂಘಟಿಸುತ್ತಾ ಬಂದಿರುವ ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ, ‌ಭುವನೇಶ್ವರಿ ದೇವಾಲಯದ ಆಶ್ರಯದಲ್ಲಿ ‘ಗಾನಗೋಷ್ಠಿ’ ಎಂಬ ವಿಶಿಷ್ಟ ಸರಣಿಯನ್ನು ಪ್ರಾರಂಭಿಸಿ ಒಂದು ವರ್ಷ ಕಳೆದಿದೆ.

ಪ್ರತಿ ತಿಂಗಳ ಕೊನೆಯ ಮಂಗಳವಾರ ಭುವನಗಿರಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಈ ಸರಣಿಯ ಹದಿಮೂರನೇ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಮಂಗಳವಾರ ಸಂಜೆ ನಡೆಯಿತು. ಮೊದಲಿಗೆ ಶ್ರೀಧರ ಸಾಗರ ಅವರು ಲಘು ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ಸಂವತ್ಸರ ಸಾಗರ ಅವರ ಹಾರ್ಮೋನಿಯಂ ಹಾಗೂ ನಿಖಿಲ್ ಕುಂಸಿ ಅವರ ತಬಲಾ ಸಾಥ್ ಹಾಡುಗಾರಿಕೆಯ ಮೆರಗನ್ನು ಹೆಚ್ಚಿಸಿತು. ನಂತರ ಆಕಾಶವಾಣಿ ‘ಬಿ’ ಗ್ರೇಡ್ ಕಲಾವಿದ ನಿತೇಶ್ ಸಾವಂತ ಗೋವಾ ಅವರು ಶಾಸ್ತ್ರೀಯ ಸಂಗೀತದಲ್ಲಿ ರಾಗ ಕಾಮೋದ ಪ್ರಸ್ತುತಪಡಿಸಿದರು. ಜೊತೆಗೆ ಕೆಲವು ಭಜನ್ ಮತ್ತು ಅಭಂಗಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದರು. ನಿತಿನ್ ಹೆಗಡೆ ಕಲಗದ್ದೆಯವರು ತಬಲಾದಲ್ಲಿ , ಅಜಯ್ ಹೆಗಡೆ ವರ್ಗಾಸರ ಹಾರ್ಮೋನಿಯಂನಲ್ಲಿ ಹಾಗೂ ಪ್ರಥಮೇಶ್ ತಾನ್ಪುರದಲ್ಲಿ ಉತ್ತಮವಾಗಿ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಲಾವಿದರಾದ ಕೊಳಲು ವಾದಕ ಪಂ. ಪ್ರಕಾಶ ಹೆಗಡೆ ಕಲ್ಲಾರೆಮನೆ, ತಬಲಾ ವಾದಕರಾದ ಡಾ. ಸಮೀರ ಬಾದ್ರಿ, ಮಹೇಶ ಹೆಗಡೆ ಹೊಸಗದ್ದೆ, ಸಂತೂರ ವಾದಕ ಚೈತನ್ಯಕುಮಾರ ಭಟ್ಟ, ಹಾರ್ಮೋನಿಯಂ ವಾದಕ ಜೈರಾಮ ಭಟ್ಟ ಮುಂತಾದವರು ಪ್ರೇಕ್ಷಕರ ನಡುವೆ ಇರುವುದು ವಿಶೇಷವಾಗಿತ್ತು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ಸ್ವಾಗತಿಸಿದರು. ಎಂ.ಕೆ.ನಾಯ್ಕ ಹೊಸಳ್ಳಿ ಕಲಾವಿದರನ್ನು ಪರಿಚಯಿಸಿದರು. ಪ್ರಶಾಂತ ಕಾಶಿಗದ್ದೆ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top