Slide
Slide
Slide
previous arrow
next arrow

INF ಟ್ರೇಡ್ ಎಕ್ಸ್‌ಪೋ 2025: ಸ್ಥಳೀಯ ವ್ಯಾಪಾರಗಳಿಗೆ ಸಬಲೀಕರಣದ ನೂತನ ವೇದಿಕೆ

300x250 AD

ಭಟ್ಕಳ: ಇಂಡಿಯನ್ ನವಾಯತ್ ಫೋರಂ (INF) ವತಿಯಿಂದ ಜ.11 ರಿಂದ 15ರವರೆಗೆ ಐದು ದಿನಗಳ ಕಾಲ ಭಟ್ಕಳದ NH 66, ಐಸ್ ಫ್ಯಾಕ್ಟರಿ ಹತ್ತಿರ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು INF ಟ್ರೇಡ್ ಎಕ್ಸ್‌ಪೋ 2025 ಅನ್ನು ಆಯೋಜಿಸಿದೆ ಎಂದು ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅರ್ಷದ್ ಮೊಹತೆಶಮ್ ತಿಳಿಸಿದ್ದಾರೆ. 

ಅವರು ಭಾನುವಾರ ಕಾಜಿಯ ಬಂಗ್ಲೆ ಎದುರು ಇರುವ ಐ.ಎನ್.ಎಫ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಈ ಎಕ್ಸ್‌ಪೋ ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯುವ ಉದ್ದೇಶ ಹೊಂದಿದ್ದು ಸ್ಥಳೀಯ ವ್ಯಾಪಾರಗಳಿಗೆ ಸಬಲೀಕರಣದ ನೂತನ ವೇದಿಕೆ ಒದಗಿಸಿಕೊಡಲಿದೆ ಎಂದರು. 

2022 ರಲ್ಲಿ ಜರುಗಿದ INF ಟ್ರೇಡ್ ಎಕ್ಸ್‌ಪೋ ಸ್ಥಳೀಯ ವ್ಯಾಪಾರಿಗಳಿಗೆ ಬಲವರ್ದನೆ  ನೀಡಿತ್ತು. 180ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ ಈ ಎಕ್ಸ್‌ಪೋ ವ್ಯಾಪಾರ ಕ್ಷೇತ್ರಕ್ಕೆ ಮಹತ್ತರ ಒತ್ತಾಸೆಯಾಗಿತ್ತು. 2025ರ ಈ ಎಕ್ಸ್ ಪೋ ಮತ್ತಷ್ಟು ದೊಡ್ಡದಾಗಿ, ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲಿದ್ದು, 200ಕ್ಕೂ ಹೆಚ್ಚು ಸ್ಟಾಲ್‌ಗಳು ಹಾಗೂ 20,000ಕ್ಕೂ ಅಧಿಕ ಸಂದರ್ಶಕರನ್ನು ಸೆಳೆಯಲಿದೆ ಎಂದು ಅವರು ಮಾಹಿತಿ ನೀಡಿದರು. 

2025ರ ಎಕ್ಸ್‌ಪೋ ದಲ್ಲಿ ಕಾರ್ಯಾಗಾರಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳಾದ ವ್ಯಾಪಾರ ನೋಂದಣಿ ಮಾರ್ಗದರ್ಶನ, ಆಹಾರ ಉದ್ಯಮದ ನಿಯಮಾವಳಿ ಮತ್ತು ಪ್ಯಾಕೇಜಿಂಗ್ ತಂತ್ರಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೇಲೆ ವ್ಯಾಪಾರ ಪ್ರಾರಂಭದ ಸಲಹೆಗಳು, ದಾಸ್ತಾನು ನಿರ್ವಹಣೆ ಮತ್ತು ಬಿಲ್ಲಿಂಗ್ ತಂತ್ರಜ್ಞಾನಗಳು ಒಳಗೊಂಡಿದ್ದು ಈ ಕಾರ್ಯಾಗಾರಗಳನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ತಜ್ಞರು ನಡೆಸಿಕೊಡಲಿದ್ದಾರೆ. 

300x250 AD

ಸ್ಟಾಲ್‌ಗಳನ್ನು ಕಾಯ್ದಿರಿಸಲು ನೋಂದಣಿ ಫಾರ್ಮ್ ಮೂಲಕ ರಿಜಿಸ್ಟರ್ ಮಾಡಬಹುದು ಅಥವಾ INF ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ 7022020454 / 9353151493 / 9741803006 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ INF ಕಾರ್ಯದರ್ಶಿ ಮತ್ತು INF ಟ್ರೇಡ್ ಎಕ್ಸ್‌ಪೋ 2025 ರ ಸಂಚಾಲಕ ಮಾಜ್ ಜುಕಾಕು,  ಕಾರ್ಯಕಾರಿ ಸದಸ್ಯರಾದ ಫೈಜಾನ್ ಭರ್ಮಾವರ್, ಅಫ್ತಾಬ್ ಕೋಲಾ, ಇಮ್ತಿಯಾಜ್ ದಾಮ್ಡಾ, ತನ್ವೀರ್ ಮೋಟಿಯಾ, ಖಮರ್‍ ಉಝ್ಝಮಾ ಮೋಟಿಯಾ, ಹ್ಯಾರಿಸ್ ಶಾಬಂದರಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top