ದಾಂಡೇಲಿ : ತಾಲೂಕಿನ ಪ್ರಗತಿಪರ ಕೃಷಿಕರಾಗಿರುವ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಟಗೇರಾದ ನಿವಾಸಿ ಮಹಾವೀರ ಬಾಲಚಂದ್ರ ನೇರ್ಲೆಕರ ಅವರಿಗೆ ಶಿರಸಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕೃಷಿ ಕ್ಷೇತ್ರದಲ್ಲಿ ಮಾಡಿದ ಅನುಪಮ ಸಾಧನೆಯೆನ್ನು ಗುರುತಿಸಿ ಮಹಾವೀರ ಬಾಲಚಂದ್ರ ನೇರ್ಲೆಕರ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜೀವವಿಮಾ ಪ್ರತಿನಿಧಿಯಾಗಿರುವ ಮಹಾವೀರ ಬಾಲಚಂದ್ರ ನೇರ್ಲೆಕರ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಕಾರ್ಯಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.