ಶಿರಸಿ: “ವಿಕಲಚೇತನರಿಗೆ ಸಂವಿಧಾನಬದ್ಧ ಹಕ್ಕುಗಳಿವೆ. ಸಮಾಜ, ಸರ್ಕಾರ ನೀಡುವ ಸೌಲಭ್ಯ ವಿಕಲಚೇತನರಿಗೆ ತಲುಪಲು ಅಜಿತ ಮನೋಚೇತನದಂಥ ಮಾದರಿ ಸೇವಾ ಸಂಸ್ಥೆಗಳು ಗಣನೀಯ ಕಾರ್ಯ ನಡೆಸುತ್ತಿವೆ. ಮಾತೃ ಹೃದಯ ಎಲ್ಲರಲ್ಲಿ ಇರಲಿ. ಕಾನೂನು ಸೇವಾ ಸಮಿತಿ ಮೂಲಕ ಸಾಧ್ಯವಾದ ಸೇವೆ ನೀಡಲು ಪೂರ್ಣ ಪ್ರಯತ್ನ ನಡೆಸುತ್ತೇವೆ” ಎಂದು ಶಿರಸಿಯ ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಶಾರದಾದೇವಿ ತಮ್ಮ ಬದ್ಧತೆ ಪ್ರಕಟಿಸಿದರು.
ಅವರು ಮರಾಠಿಕೊಪ್ಪದ ಅಜಿತ ಮನೋಚೇತನಾ ಸಂಸ್ಥೆಯಲ್ಲಿ ಡಿ.7ರಂದು ದೀಪ ಬೆಳಗಿ ವಿಕಲಚೇತನರ ದಿನಾಚರಣೆ ಸಮಾರಂಭ ಉದ್ಘಾಟಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶೃತಿ ವಾರ್ತಾಪತ್ರ ಬಿಡುಗಡೆ ಮಾಡಿದರು. ಕ್ರೀಡಾ ಸಮವಸ್ತ್ರವನ್ನು ರಾಜ್ಯ ಸ್ಪೇಶಲ್ ಒಲಿಂಪಿಕ್ಸ್ ನಿರ್ದೇಶಕ ಅಮರೇಂದ್ರ ವಿತರಿಸಿದರು. ಶಿರಸಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶ್ರೀಮತಿ ವೀಣಾ ಸಿರ್ಸಿಕರ ಅವರು ಪೌಷ್ಠಿಕ ಆಹಾರವನ್ನು ವಿಶೇಷ ಮಕ್ಕಳಿಗೆ ನಮ್ಮ ಇಲಾಖೆಯಿಂದ ನೀಡಲು ಮುಂದಾಗುತ್ತೇವೆ ಎಂದರು. ಎಮ್.ಆರ್. ಡಬ್ಲೂ ಶ್ರೀಮತಿ ಸ್ನೇಹಾ ಇವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ವಾರ್ತಾಪತ್ರ ಸಂಪಾದಕರಾದ ಡಾ|| ಕೇಶವ ಕೊರ್ಸೆ ಅವರನ್ನು ಅಭಿನಂದಿಸಿದರು. ಸ್ಪೇಶಲ್ ಒಲಿಂಪಿಕ್ಸ್ ವಿವರಗಳನ್ನು ಶ್ರೀಮತಿ ಶಾಂತಲಾ ಸುರೇಶ ರಾಜ್ಯ ಸ್ಪೇಶಲ್ ಒಲಿಂಪಿಕ್ಸ್ ಸಮಿತಿ ಇವರು ನೀಡಿದರು. ಜಿಲ್ಲಾ ಒಲಿಂಪಿಕ್ಸ್ ಸಮಿತಿಯನ್ನು ಅನಂತ ಹೆಗಡೆ ಆಶೀಸರ ಪ್ರಕಟಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ರೂಪ್‌ಸಿಂಗ್ ರಾಜ್ಯಮಟ್ಟದ ಸ್ಪೇಶಲ್ ಒಲಿಂಪಿಕ್ಸ್ ಜನವರಿ 4ನೇ ವಾರ ಮೂಡಬಿದ್ರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು. ಉತ್ತರಕನ್ನಡ ಜಿಲ್ಲೆಯ ಸ್ಪೇಶಲ್ ಒಲಿಂಪಿಕ್ಸ್ ಜನವರಿ 2ನೇ ವಾರ ಶಿರಸಿಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಸುಧೀರ ಭಟ್ ಇವರು ತಿಳಿಸಿದರು. ಶ್ರೀಮತಿ ನರ್ಮದಾ ಹೆಗಡೆ ವಂದಿಸಿದರು. ಉತ್ತರಕನ್ನಡ ಜಿಲ್ಲೆಯ ಕುಮಟಾ, ಯಲ್ಲಾಪುರ, ಭಟ್ಕಳ, ಹೊನ್ನಾವರ, ಯಲ್ಲಾಪುರ ತಾಲೂಕಿನ 30 ವಿಶೇಷ ಶಿಕ್ಷಕರು ಭಾಗವಹಿಸಿದ್ದರು. ಉದಯ ಸ್ವಾದಿ, ಗಣಪತಿ ಹೆಗಡೆ ಬಿಸಲಕೊಪ್ಪ, ವಿನಾಯಕ ಎಮ್. ಭಟ್, ಜಿ.ವಿ. ಹೆಗಡೆ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.