Slide
Slide
Slide
previous arrow
next arrow

ಯಕ್ಷಗಾನ‌ದಿಂದ ಪೌರಾಣಿಕ ಕಥೆಗಳ ಪರಿಚಯ ಸುಲಭ ಸಾಧ್ಯ: ರವೀಂದ್ರ ಹೆಗಡೆ

300x250 AD

ಸಿದ್ದಾಪುರ: ಯಕ್ಷಗಾನದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಮಹಾಭಾರತ, ರಾಮಾಯಣ ಹಾಗೂ ಭಗವದ್ಗೀತೆಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.

ತಾಲೂಕಿನ ಕ್ಯಾದಗಿಯ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ಆಭಾರಿ ಟ್ರಸ್ಟ್ ಬೆಂಗಳೂರು ಇವರು ಯಕ್ಷಗಾನ ಕಲಾವಿದರಾಗಿದ್ದ ದಿ.ಸುಬ್ರಾಯ ಡಿ.ಹೆಗಡೆ ಇಳಿಮನೆ ಇವರ ಸಹಾಯಾರ್ಥ ಆಯೋಜಿಸಿದ್ದ ಗೌರವ ಪುರಸ್ಕಾರ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು. ಆಭಾರಿ ಟ್ರಸ್ಟ್ನ ರೂವಾರಿಗಳು ಹಾಗೂ ಸಂಘಟಕರಾಗಿದ್ದ ದಿ.ಸುಬ್ರಾಯ ಹೆಗಡೆ ಇಳಿಮನೆ ಇವರು ಅನೇಕ ಯಕ್ಷಗಾನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದರು ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಅವರು ಸುಬ್ರಾಯ ಹೆಗಡೆ ಇಳಿಮನೆ ಅವರೊಂದಿಗಿನ ಒಡನಾಟದ ಕುರಿತು ಮಾತನಾಡಿದರು.
ಹಿರಿಯರಾದ ವಿಶ್ವನಾಥ ಭಟ್ಟ ಅಧ್ಯಕ್ಷತೆವಹಿಸಿದ್ದರು. ದೇವಾಲಯದ ಅಧ್ಯಕ್ಷ ವೇ.ಮೂ.ನಾರಾಯಣ ಭಟ್ಟ ಕಲ್ಲಾಳ, ರಾಜೇಂದ್ರ ಹೆಗಡೆ ಇಳಿಮನೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಹಾಗೂ ಸಂಘಟಕ ರಘುಪತಿ ನಾಯ್ಕ ಹೆಗ್ಗರಣಿ ಅವರಿಗೆ ನಗದು ಹತ್ತು ಸಾವಿರ ರೂಗಳನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ನಂತರ ಕಂಸವಧೆ ಯಕ್ಷಗಾನ ಕೇಶವ ಹೆಗಡೆ ಕಿಬ್ಳೆ ಸಂಯೋಜನೆಯಲ್ಲಿ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ನಗರಾಜರಾವ್ ಮಗವಳ್ಳಿ, ಶ್ರೀಪತಿ ಹೆಗಡೆ ಕಂಚಿಮೆನ, ಗಂಗಾಧರ ಹೆಗಡೆ ಕಂಚಿಮನೆ ಸಹಕರಿಸಿದರು.
ಮುಮ್ಮೇಳದಲ್ಲಿ ಲಕ್ಷ್ಮಿನಾರಾಯಣ ಶಿರಗುಣಿ, ಕೃಷ್ಣಾ ಗೌಡ ವಾನಳ್ಳಿ, ಪ್ರವೀಣ ತಟ್ಟಿಸರ, ವೆಂಕಟರಮಣ ಹೆಗಡೆ ಮಾದನಕಳ್, ನಿತಿನ್ ಹೆಗಡೆ ದಂಟಕಲ್ ಇವರು ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.
ಮನಸ್ವಿ ಹೆಗಡೆ ಪ್ರಾರ್ಥನೆ ಹಾಡಿದರು. ಕೇಶವ ಹೆಗಡೆ ಕಿಬ್ಳೆ ಸ್ವಾಗತಿಸಿದರು. ಸುನಾದ ರವೀಂದ್ರ ಹೆಗಡೆ ಇಳಿಮನೆ ಸನ್ಮಾನ ಪತ್ರ ವಾಚಿಸಿದರು. ಸಂಗೀತಾ ಸುಬ್ರಾಯ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top