Slide
Slide
Slide
previous arrow
next arrow

ಸೆ.22ಕ್ಕೆ ಭುವನಗಿರಿಯಲ್ಲಿ ಕನ್ನಡಜ್ಯೋತಿ ರಥಕ್ಕೆ ಚಾಲನೆ: ಪೂರ್ವಭಾವಿ ಸಭೆ

300x250 AD

ಸಿದ್ದಾಪುರ; ಮಂಡ್ಯದಲ್ಲಿ ಜರುಗಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಜ್ಯೋತಿ ರಥ ಯಾತ್ರೆಗೆ ಸೆ.22ರಂದು ತಾಲೂಕಿನ ಭುವನಗಿರಿಯಲ್ಲಿರುವ ಶ್ರೀಭುವನೇಶ್ವರಿ ದೇವಾಲಯದಿಂದ ಚಾಲನೆ ದೊರಕಲಿದ್ದು ಈ ಕುರಿತು ಕಾರ್ಯಕ್ರಮದ ರೂಪುರೇಷೆ ತಯಾರಿಸಲು ತಹಸೀಲ್ದಾರ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅಧ್ಯಕ್ಷತೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿರಥ ಯಾತ್ರೆ ಕಾರ್ಯಕ್ರಮವನ್ನು ನಡೆಸಲು ತಾಲೂಕು ಆಡಳಿತ ಸಿದ್ದವಾಗಿದೆ. ಅನುದಾನದ ಕೊರತೆ ಇದ್ದರೂ ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ನಡೆಸಲಾಗುವುದು. ಇದು ಕನ್ನಡ ತಾಯಿಯ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಭಾಗವಹಿಸಬೇಕು. ಸೆ.22ರಂದು ಬೆಳಗ್ಗೆ 9ಕ್ಕೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುವುದು ನಂತರ ಸಭಾಕಾರ್ಯಕ್ರಮ ನಡೆಯಲಿದೆ. 11ಕ್ಕೆ ಜ್ಯೋತಿಯನ್ನು ರಥದಲ್ಲಿ ಏರಿಸಲಾಗುವುದು. ನಂತರ ಪ್ರಾರಂಭವಾಗುವ ಮೆರವಣಿಗೆ ಕಾರ್ಯಕ್ರಮ ಬೇಡ್ಕಣಿ ಮಾರ್ಗವಾಗಿ ಹೊರಟ ರಥ ಸಿದ್ದಾಪುರ ಪಟ್ಟಣ ಪ್ರವೇಶಿಸಲಿದೆ. ಹೊಸೂರು ಜೋಗವೃತ್ತದಲ್ಲಿ ಪಪಂ ವತಿಯಿಂದ ಸ್ವಾಗತ ಹಾಗೂ ಪೂಜೆ ನಡೆಯಲಿದೆ. ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಲಿದೆ. ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್,ಕನ್ನಡಪರ ಸಂಘಟನೆಗಳು,ಲಯನ್ಸ್ ಕ್ಲಬ್,ನಿವೃತ್ತ ನೌಕರರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಸ್ಥಳೀಯ ಕಲಾವಿದರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲ ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು. ಈ ಕುರಿತು ಸುತ್ತೋಲೆ ಹೊರಡಿಸಲಾಗುವುದು ಮತ್ತು ಪ್ರತಿಯೊಬ್ಬ ನೌಕರರ ಹಾಜರಾತಿ ಪಡೆಯಲಾಗುವುದು ಎಂದು ಹೇಳಿದರು.
ತಹಸೀಲ್ದಾರ ಮಧುಸೂದನ ಕುಲಕರ್ಣಿ,ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಕನ್ನೇಶ ನಾಯ್ಕ ಕೋಲಸಿರ್ಸಿ,ನಾಗರಾಜ ನಾಯ್ಕ ಮಾಳಕೋಡ ಸಲಹೆ,ಸೂಚನೆ ನೀಡಿದರು. ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ,ಮುಖ್ಯಾಧಿಕಾರಿ ಜೆ.ಆರ್.ನಾಯ್ಕ, ಪಿ.ಬಿ.ಹೊಸೂರು, ಅಣ್ಣಪ್ಪ ನಾಯ್ಕ ಇತರರಿರದ್ದರು.

300x250 AD
Share This
300x250 AD
300x250 AD
300x250 AD
Back to top