ಕಾರವಾರ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯ ಉದ್ಘಾಟಣೆಯು ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿ ದೇವಲಾಯದಲ್ಲಿ ನಡೆಯಲಿದೆ.
ಕನ್ನಡ ಜ್ಯೋತಿ ರಥಯಾತ್ರೆಯು ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಲಿದ್ದು, ಸೆ,22 ರಿಂದ ಸೆ.25 ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಸಂಚರಿಸಲಿದೆ.
ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಆಗಮಿಸಲಿದ್ದು, ತಾಲೂಕಿನಲ್ಲಿ ಸಂಚರಿಸಲಿದೆ, ನಂತರ ಮಧ್ಯಾಹ್ನ 2 ಗಂಟೆಗೆ ಹೊನ್ನಾವರ ತಾಲೂಕಿನಲ್ಲಿ ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ. ಸೆಂಜೆ 4.30 ಗಂಟೆಗೆ ಕುಮಟಾ ತಾಲೂಕಿಗೆ ಆಗಮಿಸಿ ತಾಲೂಕಿನಲ್ಲಿ ಸಂಚರಿಸಲಿದೆ.
ಸೆ.23 ರಂದು ಬೆಳಗ್ಗೆ 10 ಗಂಟೆಗೆ ಅಂಕೋಲಾ ತಾಲೂಕಿಗೆ ಆಗಮಿಸಿ ರಥ ಸಂಚರಸಲಿದೆ. ನಂತರ ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾ ಕೇಂದ್ರವಾದ ಕಾರವಾರ ನಗರಕ್ಕೆ ಆಗಮಿಸಲಿದ್ದು, ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಗೋವಾದ ಕಾಣಕೋಣಗೆ ಆಗಮಿಸುವ ಕನ್ನಡ ರಥಯಾತ್ರೆಗೆ ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ. ನಂತರ ಕಾಣಕೋಣದಿಂದ ಸಂಜೆ 6.30 ಗಂಟೆಗೆ ಜೋಯಿಡಾ ತಾಲೂಕಿಗೆ ಆಗಮಿಸುವ ರಥಕ್ಕೆ ಸ್ವಾಗತ, ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ.
ಸೆ.24 ರಂದು ಬೆಳಗ್ಗೆ 10 ಗಂಟೆಗೆ ದಾಂಡೇಲಿಗೆ ಆಗಮಿಸುವ ಕನ್ನಡ ರಥಯಾತ್ರೆ ದಾಂಡೇಲಿಯಲ್ಲಿ ಸಂಚರಿಸಿ, ಮಧ್ಯಾಹ್ನ 2 ಗಂಟೆಗೆ ಹಳಿಯಾಳ ತಾಲೂಕಿಗೆ ಆಗಮಿಸಿಲಿದ್ದು ತಾಲೂಕಿನಲ್ಲಿ ಸ್ವಾಗತ ಹಾರ ಸಮರ್ಪಣೆ, ರಥ ಸಂಚಾರ ನಡೆಯಲಿದೆ.
ಸೆ.25 ರಂದು ಬೆಳಗ್ಗೆ 10 ಗಂಟೆಗೆ ಯಲ್ಲಾಪುರ ತಾಲೂಕಿಗೆ ಆಗಮಿಸುವ ಕನ್ನಡ ರಥಯಾತ್ರೆ ತಾಲೂಕಿನಲ್ಲಿ ಸಂಚರಿಸಿ ಮಧ್ಯಾಹ್ನ 12 ಗಂಟೆಗೆ ಶಿರಸಿ ತಾಲೂಕಿಗೆ ಆಗಮಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಸ್ವಾಗತ, ಹಾರ ಸಮರ್ಪಣೆ ರಥ ಸಂಚಾರದ ನಂತರ ಬೀಳ್ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ, ಲಷ್ಮೀಪ್ರಿಯಾ ತಿಳಿಸಿದ್ದಾರೆ.