ಹಳಿಯಾಳ : ತಾಲೂಕಿನ ಧಾರವಾಡ -ಉತ್ತರಕನ್ನಡ ಜಿಲ್ಲೆ ಸಂಪರ್ಕಿಸುವ ಮಾವಿನಕೊಪ್ಪ ಚೆಕ್ ಪೋಸ್ಟ್ ಹತ್ತಿರ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಗೆ ಭಾನುವಾರ ಚಾಲನೆಯನ್ನು ನೀಡಲಾಯಿತು.
ಆರಂಭದಲ್ಲಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆಯನ್ನು ಓದಲಾಯಿತು. ಈ ಸಂದರ್ಭದಲ್ಲಿ ಹಳಿಯಾಳದ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ, ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಡಿವೈಎಸ್ಪಿ ಶಿವಾನಂದ ಮದರಖಂಡಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ, ದಾಂಡೇಲಿ ನಗರ ಸಭೆಯ ಪೌರಾಯುಕ್ತರಾದ ರಾಜಾರಾಮ ಪವಾರ್, ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಸಾಳೆನ್ನವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕಿನ ಮಾವಿನಕೊಪ್ಪ, ಪಟ್ಟಣದ ಶಿವಾಜಿ ವೃತ್ತ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮುಂಭಾಗದ ರಸ್ತೆ, ಕೆಸರೊಳ್ಳಿ, ಭಾಗವತಿ, ಸಾಂಬ್ರಾಣಿ ಮೊದಲಾದ ಕಡೆಗಳಲ್ಲಿ ಮಾನವ ಸರಪಳಿಯನ್ನು ಜೋಡಿಸಿಕೊಂಡು ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದಿ ಕಲಾ ತಂಡದಿಂದ ಜಾಗೃತಿ ನೃತ್ಯ ನಡೆಯಿತು.