ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಏಕೈಕ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಶಿರಸಿ-ಸಾಗರ-ಭಟ್ಕಳ ಹೀಗೆ 3 ಕಡೆಗಳಲ್ಲಿ ಶಾಖೆಗಳನ್ನು ಹೊಂದಿ, ಕಳೆದ ಮೂರು ದಶಕಗಳ ನಯನ ಸೇವೆಯಿಂದ ಜನಮನ ಗೆದ್ದ ಶಿರಸಿಯ ಗಣೇಶ ನೇತ್ರಾಲಯವು ಸೇವೆ ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ವಿಸ್ತರಿಸುವ ಸದುದ್ದೇಶದಿಂದ ಉತ್ತರ ಕರ್ನಾಟಕದಲ್ಲಿ 9 ಶಾಖೆಗಳನ್ನು ಹೊಂದಿ, ಕಳೆದ ಆರು ದಶಕಗಳಿಂದ ಸೇವಾನಿರತ ನಾಡಿನ ಹೆಮ್ಮೆಯ ಜಾಗತಿಕ ಮಟ್ಟದ ಮೇರು ಸಂಸ್ಥೆಯಾದ ಹುಬ್ಬಳ್ಳಿಯ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಜೊತೆಗೆ ವಿಲೀನಗೊಂಡ ನಿಮಿತ್ತವಾಗಿ ಮೇ.17ರಂದು ‘ಸಂಗಮ ಸಂಭ್ರಮ’ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕ, ವಾಗ್ಮಿ ಮತ್ತು ಶಿಕ್ಷಣ ತಜ್ಞ ಡಾll ಗುರುರಾಜ ಕರ್ಜಗಿ ಆಗಮಿಸಲಿದ್ದಾರೆ. ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್ ಮತ್ತು ಎಂಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಎಂ. ಜೋಶಿ ಉಪಸ್ಥಿತರಿರಲಿದ್ದು ಎಲ್ಲರೂ ಆಗಮಿಸಬೇಕಾಗಿ ಸಂಘಟಕರ ಪರವಾಗಿ ಡಾ. ಶಿವರಾಮ ಕೆ.ವಿ. ವಿನಂತಿಸಿದ್ದಾರೆ.