ಕುಮಟಾ: 2024-25ನೇ ಸಾಲಿನ ಸಿಬಿಎಸ್ಇ ಫಲಿತಾಂಶ ಪ್ರಕಟಗೊಂಡಿದ್ದು, ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 46 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ. ಅರ್ಮಾನ್ ಮೊಂಡಾಲ್ (97%) ಪ್ರಥಮ ಸ್ಥಾನ, ಸನತ್ ರವಿ ನಾಯಕ(95%) ದ್ವಿತೀಯ ಸ್ಥಾನ, ದಿಯಾ ರಾಜೇಶ್ ನಾಯಕ (94%) ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಕೌಶಿಕ್ ಹೆಗಡೆ (93.6%), ಶಶಾಂಕ್ ಶೇಟ್ (93.2%),ಮಾನಸಿ ನಾಯಕ (93%), ಆರ್ಯನ್ ನಾಯ್ಕ (92%), ರಾಹುಲ್ ನಾಯ್ಕ (91.4%), ಅಯಾನ್ ಭಟ್ (90.6%), ಪ್ರಜ್ಞಾ ಸೂರಿ (90.6%), ಹನಿ ನಾಯಕ (90.4%), ರೋಷನಿ ನದಾಫ್(90.4%), ಅಭೀಜ್ಞಾ ಗೌಡ (89%), ಸಿಂಚನಾ ನಾಯಕ (88.4%), ಪ್ರಜ್ಞಾ ಗಾಂವಕರ್ (88.2%), ನಿಸರ್ಗಾ ಪಟಗಾರ (88.2%), ಧೀರಜ್ ನಾಯ್ಕ (85.4%), ಅಥರ್ವ ಭಟ್ (85.4%), ದುರ್ಗಶ್ರೀ (85.4%), ಸುರೇನ್ (84.2%), ಅಮೃತಾ (83.8%), ಪ್ರಜ್ವಲ್ ಮಡಿವಾಳ ((83.2%), ಪ್ರಫುಲ್ ಪಟಗಾರ (83.2%), ಸಮೃದ್ಧಿ ನಾಯ್ಕ (82.8%), ಅಪೂರ್ವ ಗಾಂವಕರ್ (81.4%), ಓಂಕಾರ್ ಧಾರೇಶ್ವರ್ (80%) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಮತ್ತು ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲಾ ಶಾಖಾಮಠಗಳ ಪೂಜ್ಯರಾದ ಸದ್ಗರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಮಿರ್ಜಾನ್ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು, ಬಿಜಿಎಸ್ ಶಾಲಾ ಶೈಕ್ಷಣಿಕ ನಿರ್ದೇಶಕರಾದ ಎಂ. ಟಿ. ಗೌಡ, ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್ಟ ವಿದ್ಯಾರ್ಥಿಗಳಿಗೆ ಮತ್ತು ಬೋಧಿಸಿದ ಶಿಕ್ಷಕರನ್ನು ಮತ್ತು ಸಹಕರಿಸಿದ ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ
ಸಿಬಿಎಸ್ಇ ಫಲಿತಾಂಶ: ಬಿಜಿಎಸ್ ಸೆಂಟ್ರಲ್ ಸ್ಕೂಲ್ ಸತತ 14ನೇ ಬಾರಿ 100% ಫಲಿತಾಂಶ
